ನ್ಯೂಸ್

ಫೆ.17ರಂದು ಹಣಕಾಸು ಡೆಪ್ಯುಟಿ ಮ್ಯಾನೇಜರ್ ಹುದ್ದೆಗೆ ಪರೀಕ್ಷೆ

ಬೆಂಗಳೂರು: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಲ್ಲಿ ಖಾಲಿ ಇರುವ 41 ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ ಫೆ.17ರಂದು ಪರೀಕ್ಷೆ ನಡೆಯಲಿದೆ.

ಅಂದು ಮಧ್ಯಾಹ್ನ 2.30ರಿಂದ ಮಧ್ಯಾಹ್ನ 4.30ರ ವರೆಗೆ ಡೆಪ್ಯುಟಿ ಮ್ಯಾನೇಜರ್ (ತಾಂತ್ರಿಕ, ಕಾನೂನು, ಹಣಕಾಸು ಮತ್ತು ಲೆಕ್ಕ ವಿಭಾಗದ ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಕೆಇಎ ಪ್ರಕಟಣೆ ಹೊರಡಿಸಿದೆ.