ನ್ಯೂಸ್

ಹಿಜಾಬ್ ಧರಿಸಿ ಪರೀಕ್ಷೆ; ಸುದೀರ್ಘವಾಗಿ ಚರ್ಚಿಸಿ ತೀರ್ಮಾನ|Exam wearing hijab

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದ್ದಂತೆಯೇ ಮತ್ತೆ ಹಿಜಾಬ್ ಸದ್ದು(Hijab sounds again as the SSLC exam approaches) ಮಾಡುತ್ತಿದೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಜಾಬ್ಗೆ ಎಂಟ್ರಿ ಸಿಗುತ್ತದೆಯೆ ಎಂಬ ಪ್ರಶ್ನೆ ತಲೆ ಎತ್ತಿದೆ.

ಕಳೆದ ಬಾರಿ ಪರೀಕ್ಷೆಯಲ್ಲಿ ಹಿಜಾಬ್ ಧರಿಸಲು ಅವಕಾಶವನ್ನು ನೀಡಲಿರಲಿಲ್ಲ. ನಂತರದಲ್ಲಿ ಹೈಕೋರ್ಟ್ ಕೂಡ ಶಿಕ್ಷಣ ಇಲಾಖೆಯ ನಿಲುವಿಗೆ ಪರವಾದ ತೀರ್ಪು ನೀಡಿತ್ತು. ಆದರೆ ಇದೀಗ ಮತ್ತೊಮ್ಮೆ ಈ ವಿಚಾರ ಮುನ್ನಲೆಗೆ ಬಂದಿದೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗೆ ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ಬಗ್ಗೆ ಚರ್ಚೆ ಮೂಲಕ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಈ ಬಗ್ಗೆ ನಾವು ಸುದೀರ್ಘವಾಗಿ ಚರ್ಚೆ ಮಾಡುತ್ತೇವೆ. ನಮಗೆ ಇನ್ನೂ ಒಂದು ತಿಂಗಳು ಕಾಲಾವಕಾಶ ಇದೆ. ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಗೋಕಳ್ಳರಿಗೆ ಗುಂಡಿಕ್ಕುವ ಕುರಿತು ಸಚಿವ ಮಂಕಾಳು ವೈದ್ಯ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ವೈಯಕ್ತಿಕ ಹೇಳಿಕೆ. ಅವರ ಹೇಳಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಯಾವ ಸಂದರ್ಭದಲ್ಲಿ ಹೇಳಿಕೆ ಕೊಟ್ಟಿದ್ದಾರೆ ಎಂದು ತಿಳಿದಿಲ್ಲ ಎಂದರು.

ಮೈಕ್ರೋ ಫೈನಾನ್ಸ್ ನಿಯಂತ್ರಣಕ್ಕೆ ಸುಗ್ರೀವಾಜ್ಞೆ

ಮೈಕ್ರೋ ಫೈನಾನ್ಸ್ ನಿಯಂತ್ರಣಕ್ಕೆ ಮೂರು ವರ್ಷ ಶಿಕ್ಷೆ ಇತ್ತು. ಅದನ್ನು ಹತ್ತು ವರ್ಷ ಮಾಡಿದ್ದೇವೆ. ಐದು ಲಕ್ಷ ದಂಡ ಮಾಡಿದ್ದೇವೆ. ಕಾನೂನು ಬಿಸಿ ತಟ್ಟಬೇಕು. ಅದಕ್ಕಾಗಿ ಈ ಬಿಲ್ ತಂದಿದ್ದೇವೆ ಎಂದು ತಿಳಿಸಿದರು.

ಸುಗ್ರೀವಾಜ್ಞೆ ಹೊರಡಿಸುವ ನಿಟ್ಟಿನಲ್ಲಿ ವಿಧೇಯಕವನ್ನು ರಾಜ್ಯಪಾಲರಿಗೆ ಕಳಿಹಿಸಿದ್ದೇವೆ. ಅವರು ಅಂಕಿತ ಹಾಕಬಹುದು. ಕಾನೂನು ತೊಡಕು ಸರಿಪಡಿಸಿದ್ದೇವೆ. ಕಾನೂನಿನ ತೊಂದರೆ ಬರದೆ ಇರುವ ಹಾಗೆ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ದೆಹಲಿಗೆ ನಿಯೋಗ ತೆರಳುತ್ತಿಲ್ಲ

ದಲಿತ ಸಚಿವರು ದೆಹಲಿ ಭೇಟಿ ಕುರಿತ ಪ್ರಶ್ನೆಗೆ, ರಾಜಕೀಯ ಉದ್ದೇಶದಿಂದ ನಾವು ದೆಹಲಿಗೆ ಹೋಗುತ್ತಿಲ್ಲ. ಇಲಾಖೆ ಕೆಲಸ ಕಾರ್ಯಗಳ ನಿಮಿತ್ತ ದೆಹಲಿಗೆ ತೆರಳುತ್ತಿದ್ದೇವೆ. ನನ್ನ ನಾಯಕತ್ವದಲ್ಲಿ ಯಾವುದೇ ನಿಯೋಗ ದೆಹಲಿಗೆ ತೆರಳುತ್ತಿಲ್ಲ. ಅಂತಹ ರಾಜಕೀಯ ಬೆಳವಣಿಗೆ ಯಾವುದು ಇಲ್ಲ ಎಂದು ಡಾ.ಪರಮೇಶ್ವರ ಸ್ಪಷ್ಟಪಡಿಸಿದರು.