ನ್ಯೂಸ್

ಕೈ ಹಿಡಿದ ಮಾಜಿ ಶಾಸಕ ಅಶ್ವತ್ಥ್ ಎಚ್ಡಿಕೆ ವಿರುದ್ಧ ವಾಗ್ದಾಳಿ

ರಾಮನಗರ: ಚನ್ನಪಟ್ಟಣದ ಮಾಜಿ ಶಾಸಕ ಎಂ.ಸಿ.ಅಶ್ವತ್ಥ್ ಜೆಡಿಎಸ್ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.

ಕಳೆದ ಹಲವಾರು ದಿನಗಳಿಂದ ಹರಿದಾಡುತ್ತಿದ್ದ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ತೆರೆ ಬಿದ್ದಂತೆ ಆಗಿದ್ದು, ಚನ್ನಪಟ್ಟಣದ ತಮ್ಮ ನಿವಾಸದಲ್ಲಿ ಅಶ್ವತ್ಥ್, ಸಂಸದ ಡಿ.ಕೆ.ಸುರೇಶ್ ಸಮ್ಮುಖದಲ್ಲಿ ಜೆಡಿಎಸ್ ಗೆ ವಿಧಾಯ ಹೇಳಿದರು.

ಈ ವೇಳೆ ಎಚ್ ಡಿಕೆ ವಿರುದ್ಧ ಹರಿಹಾಯ್ದ ಅಶ್ವತ್ಥ್  ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಅವರ ವೈಯಕ್ತಿಕ ವಿಷಯ. ಇಲ್ಲಿಯವರೆಗೆ ಜಾತ್ಯತೀತ ಅಂತ ಹೋರಾಟ ಮಾಡಿಕೊಂಡು ಬಂದಿದ್ದರು. ದೇವೇಗೌಡರು ಇರೋವರೆಗೂ ಈ ಪಕ್ಷಕ್ಕೆ ಗೌರವ ಇರುತ್ತೆ ಅಂತ ತಿಳಿದುಕೊಂಡಿದ್ದೊ, ದೇವೇಗೌಡರಿಗೆ ಅದೇನ್ ಮಾಡಿದ್ದಾರೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಜಾತ್ಯತೀತ ಬಿಟ್ಟು ಹೋಗ್ತಿರಲಿಲ್ಲ ಅಂತ ತಿಳಿದುಕೊಂಡಿದ್ದೋ, ಚನ್ನಪಟ್ಟಣ, ಹಾಸನದಲ್ಲಿ ಅಲ್ಪಸಂಖ್ಯಾತರು ಮತ ಕೊಟ್ಟಿರುವಹಾಗೆ ಎಲ್ಲೂ ಕೊಟ್ಟಿಲ್ಲ ಎಂದು ಬೇಸರಿಸಿದರು.

ಅಲ್ಲದೆ, ಅವರ ಕುಟುಂಬ ರಾಜಕಾರಣ ವೈಯಕ್ತಿಕವಾಗಿ ನನಗೆ ಬೇಸರ ತರಸಿದೆ. ನಾವು 25-30 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಅದೆಲ್ಲವೂ ಬಿಟ್ಟು ನಾಯಕರಾಗಿ ಸಹಕಾರ ಕೊಡಬೇಕಲ್ವಾ?

ಕಾಂಗ್ರೆಸ್ ನವರಾದ್ರೂ ಡಿ.ಕೆ ಸಹೋದರರು ನಮಗೆ ಸಹಕಾರ ಕೊಡುತಿದ್ದಾರೆ. ಎಲ್ಲೇ ಇದ್ರೂ ನಮ್ಮ ಫೋನ್ ತೆಗೆದು ಮಾತಾಡ್ತಾರೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.