ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಕೇಂದ್ರ ಸಚಿವ ಕೆ.ಎಚ್​.ಮುನಿಯಪ್ಪ,  
ನ್ಯೂಸ್

ಜ.9ಕ್ಕೆ ಕೋಲಾರಕ್ಕೆ ಸಿದ್ದರಾಮಯ್ಯ ಭೇಟಿ; ಕಾರ್ಯಕರ್ತರ ಸಭೆಯಲ್ಲಿ ಸ್ಪರ್ಧೆ ಬಗ್ಗೆ ಘೋಷಣೆ

ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ವರ್ಷ ಜ.9ರಂದು ಕೋಲಾರಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಭಾನುವಾರ ಬಂಗಾರಪೇಟೆಯ ಎಸ್​.ಎನ್​. ಸಿಟಿಯಲ್ಲಿ ಶಾಸಕ ರಮೇಶ್​ಕುಮಾರ್​ ನೇತೃತ್ವದಲ್ಲಿ ಟಬಂಧನ್​ ಮುಖಂಡರು ಪೂರ್ವಭಾವಿ ಸಭೆ ನಡೆಸಿದರು.

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವ ಬಗ್ಗೆ ಊಹಾಪೋಹಗಳು ಹರಡಿದ್ದವು. ನ.13ರಂದು ಕೋಲಾರಕ್ಕೆ ಬಂದು ಟೆಂಪಲ್​ ರೌಂಡ್ಸ್​ ಮಾಡಿದ ನಂತರ ಟಬಂದನ್​ ಬಲವಂತಕ್ಕೆ ಸಿದ್ದರಾಮಯ್ಯ ಬಂದು ಹೋಗಿದ್ದಾರೆ, ಕೋಲಾರಕ್ಕೆ ಅವರು ಬರುವುದಿಲ್ಲ ಎಂಬ ಸುದ್ದಿ ಹರಡಿತ್ತು. ಬಂಧನ್​ ವಿರೋಧಿ ಬಣದ ಕೆ.ಎಚ್​.ಮುನಿಯಪ್ಪ ಹಾಗೂ ಬಣದವರು ಸಿದ್ದರಾಮಯ್ಯ ಬರುವುದಾದರೆ ಸ್ವಾಗತವಿದೆ. ಆದರೆ ಟಬಂಧನ್​ ಮಾತುಕೇಳಿ ಬರುವುದ ಬೇಡ. ಇಲ್ಲಿನ ಭಿನ್ನಮತ ಸರಿಪಡಿಸಿಕೊಂಡು ಬರಲಿ. ಇಲ್ಲವಾದರೆ ಸ್ಥಳಿಯರಿಗೆ ಆದ್ಯತೆ ಸಿಗಲಿ ಎಂದು ಗುಡುಗಿದ್ದರು. ಇತ್ತೀಚೆಗೆ ಕಾಂಗ್ರೆಸ್​ ಕಚೇರಿ ಮುಂಭಾಗ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ವಿಷಯಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್​ನ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು.

ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಆಹ್ವಾನಿಸಲು ಟಬಂಧನ್​ ಮುಖಂಡರು ಯಾರು? ಇವರು ೇತ್ರದಲ್ಲಿ ಸಭೆಗಳನ್ನು ಮಾಡಲು ಅನುಮತಿ ಕೊಟ್ಟವರು ಯಾರು? ಎಂದು ಕಾಂಗ್ರೆಸ್​ ಕಾರ್ಯಕರ್ತರ ಸಭೆಯಲ್ಲಿ ಕೆ.ಎಚ್​.ಮುನಿಯಪ್ಪ ಟೀಕಾ ಪ್ರಹಾರ ನಡೆಸಿ ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರಬೇಕೆಂದು ನಾನು ಸುಮ್ಮನಿದ್ದೇನೆ. ಎಲ್ಲರೂ ಒಂದಾಗಿ ಹೋಗೋಣ ಎನ್ನದೆ ಈ ರೀತಿಯ ಗುಂಪುಗಾರಿಕೆ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದರು.

ಈ ಮಧ್ಯೆ ರಮೇಶ್​ ಕುಮಾರ್​ ತಂಡ, ಕೆ.ಎಚ್​.ಮುನಿಯಪ್ಪ ಅವರ ಎಚ್ಚರಿಕೆಯನ್ನು ಮೌನವಾಗಿ ಸ್ವೀಕರಿಸುತ್ತಾ ತಮ್ಮ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿಕೊಂಡು ಕೋಲಾರಕ್ಕೆ ಸಿದ್ದರಾಮಯ್ಯ ಬಂದೇ ಬರುತ್ತಾರೆ. ೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ ಎಂಬ ನಿಟ್ಟಿನಲ್ಲಿ ಸಂಟನೆ ಹಾಗೂ ಕಾರ್ಯಕರ್ತರ ಸಭೆಗಳನ್ನು ಮುಂದುವರಿಸುತ್ತಾ ಬಂದಿದ್ದರು.

ಜ.9 ರಂದು ಸಿದ್ದರಾಮಯ್ಯ ಕೋಲಾರಕ್ಕೆ ಬರುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಭಾನುವಾರ ಶಾಸಕರಾದ ರಮೇಶಕುಮಾರ್​, ಕೃಷ್ಣಬೈರೇಗೌಡ, ಎಸ್​.ಎನ್​.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ವಿಧಾನ ಪರಿಷತ್​ ಸದಸ್ಯರಾದ ನಜೀರ್​ ಅಹ್ಮದ್​, ಎಂ.ಎಲ್​.ಅನಿಲ್​ಕುಮಾರ್​, ಮಾಜಿ ಶಾಸಕರಾದ ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್​, ಮುಳಬಾಗಿಲಿನ ಕೊತ್ತೂರು ಮಂಜುನಾಥ್​, ಮುಖಂಡರಾದ ಸಿ.ಮುನಿಯಪ್ಪ, ಮುನಿಸ್ವಾಮಿ, ವಕೀಲ ಶ್ರೀಕೃಷ್ಣ ಇವರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ. ಕೆಜಿಎಫ್​ ಶಾಸಕಿ ರೂಪಕಲಾ ಶಶಿಧರ್​ ಹಾಗೂ ಡಿಸಿಸಿ ಬ್ಯಾಂಕ್​ ಅಧ್ಯಕ್ಷ ಗೋವಿಂದಗೌಡರಿಗೂ ಸಭೆಗೆ ಆಹ್ವಾನ ಇತ್ತಾದರೂ ಕೆಲಸದ ನಿಮಿತ್ತ ಈ ಇಬ್ಬರೂ ಗೈರಾಗಿದ್ದರು ಎನ್ನಲಾಗಿದೆ.

ಒಗ್ಗಟ್ಟು ಪ್ರದರ್ಶನ

ಶಾಸಕ ರಮೇಶ್​ಕುಮಾರ್​.

ಜ.9ರಂದು ಕೋಲಾರ ಕಾಂಗ್ರೆಸ್​ ಕಾರ್ಯಕರ್ತರಿಗೆ ಮಾತ್ರ ಸಭೆ ಏರ್ಪಡಿಸಲಾಗಿದೆ. ಅಂದು ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುವ ವಿಚಾರ ಬಹಿರಂಗಪಡಿಸಲಿದ್ದಾರೆ. ಸಭೆ ನಡೆಯುವ ಸ್ಥಳ ನಿಗದಿಪಡಿಸಿಲ್ಲ. ಈಗಾಗಲೇ 3 ಸ್ಥಳಗಳನ್ನು ಗುರುತಿಸಲಾಗಿದೆ ಎನ್ನಲಾಗಿದೆ.

ಕೆ.ಎಚ್​.ಮುನಿಯಪ್ಪ ಹಾಗೂ ಅವರ ಗುಂಪಿನವರಿಗೆ ಸಿದ್ದರಾಮಯ್ಯನವರೇ ನೇರವಾಗಿ ತಿಳಿಸಿದ್ದಾರೆ. ಅಂದು ನಡೆಯುವ ಕಾರ್ಯಕ್ರಮಕ್ಕೆ ಕೆ.ಎಚ್​.ಮುನಿಯಪ್ಪ ಸೇರಿದಂತೆ ಅವರ ಬೆಂಬಲಿಗರು ಆಗಮಿಸಲಿದ್ದಾರೆ. ಕೋಲಾರದಲ್ಲಿ ಗುಂಪುಗಾರಿಕೆಗೆ ಇನ್ಮುಂದೆ ಅವಕಾಶ ನೀಡಬಾರದು, ಕಾರ್ಯಕ್ರಮ ಸುಸೂತ್ರವಾಗಿ ನಡೆಯಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎನ್ನಲಾಗಿದೆ.