ನ್ಯೂಸ್

ಅಬ್ಬಬ್ಬಾ…! ಬ್ರೇಕಪ್ ಆದ ನಂತರ ಮಾಜಿ ಗರ್ಲ್‌ಫ್ರೆಂಡ್ ಬಳಿ ಯುವಕ ಕೇಳಿದ್ದೇನು?

ಆಸ್ಟ್ರೇಲಿಯ: ಪ್ರೀತಿ ಎಂದರೆ ಸುಂದರವಾದ ಬಂಧವಾಗಿದೆ. ಯುವಕ, ಯುವತಿಯರು ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಸುಖಃ ಹಾಗೂ ದುಖಃಕ್ಕೆ ಇಬ್ಬರು ಪಾಲದಾರರಾಗಿರುತ್ತಾರೆ. ಇಬ್ಬರು ಪ್ರೀತಿಯಿಂದ ಕೆಲವು ವಸ್ತು ಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಇಬ್ಬರ ನಡುವೆ ಸಂಬಂಧ ಕಡಿದುಕೊಂಡರೆ ಇಬ್ಬರ ಜೀವನದ ಹಾದಿಯೇ ಬದಲಾಗುತ್ತದೆ. ಇಲ್ಲೊಬ್ಬ ಯುವಕ ಬ್ರೇಕಪ್ ಮಾಡಿಕೊಂಡ ಗರ್ಲ್‌ಫ್ರೆಂಡ್ ಬಳಿ ಖರ್ಚು ಮಾಡಿದ ಹಣ ವಾಪಸ್​​ ಕೇಳಿದ್ದಾನೆ.

ಆಸ್ಟ್ರೇಲಿಯದ ಅಡಿಲೇಡ್‌ನಲ್ಲಿ ವಾಸಿಸುವ ಆಯ್ಲೆ ತನ್ನ ಸಂಗಾತಿ ಅಲೆಕ್ಸ್‌ನೊಂದಿಗೆ ಸಂಬಂಧ ಹೊಂದಿದ್ದಳು. ನಂತರ ಆತನಿಂದ ದೂರವಾಗಿದ್ದಳು. ಸ್ಪಲ್ಪ ದಿನಗಳ ನಂತರ ಆಕೆಗೆ ಖರ್ಚು ಮಾಡಿದ ಹಣದ ಲಿಸ್ಟ್‌ನ್ನು ಕಳುಹಿಸಿ ಅದರಲ್ಲಿ ಅರ್ಧ ಹಣವನ್ನು ಪಾವತಿಸುವಂತೆ ಹೇಳಿದ್ದಾನೆ. ಮಾಜಿ ಪ್ರಿಯಕರ ಕಳುಹಿಸಿದ ಲಿಸ್ಟ್​​ನ್ನು ಆಯ್ಲೆ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪ್ರತಿ ಬಾರಿ ನಾವಿಬ್ಬರು ಹೊರಗೆ ಹೋದ ವೇಳೆ ಬಿಲ್​​ನ ಅರ್ಧ ಭಾಗದಷ್ಟು ನನ್ನ ಬಳಿಯೆ ತೆಗೆದುಕೊಳ್ಳುತ್ತಿದ್ದನು. ಇದನ್ನೆಲ್ಲ ಗಮನಿಸಿದಾಗ ಆತ ನನ್ನನ್ನು ನಿಜವಾಗಿಯು ಪ್ರೀತಿ ಮಾಡುತ್ತಿದ್ದಾನ? ಎನ್ನುವ ಪ್ರಶ್ನೆ ಕಾಡುತ್ತಿತ್ತು. ಎಂದು ಯುವತಿ ಸೋಶಿಯಲ್​​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಯುವಕ ಯುವತಿಗಾಗಿ ಖರ್ಚು ಮಾಡಿದ ಲಿಸ್ಟ್​​​ ನೋಡಿದ ನೆಟ್ಟಿಗರು ಅಚ್ಚರಿಯ ಜೊತೆ ಹಾಸ್ಯದ ಕಾಮೆಂಟ್ ಮಾಡಿದ್ದಾರೆ.