ನ್ಯೂಸ್

ನೆಲದಲ್ಲಿ ಕೂತು ಊಟ ಮಾಡಿದ ಶೆಹನಾಝ್​ ಗಿಲ್; ಅಭಿಮಾನಿಗಳಿಂದ ಮೆಚ್ಚುಗೆ...

ನವದೆಹಲಿ: ದುಬೈಗೆ ಹೋಗಿದ್ದ ಬಿಗ್​ಬಾಸ್​ನ ಸ್ಪರ್ಧಿ ಶೆಹನಾಝ್ ಗಿಲ್​ ನೆಲದಲ್ಲಿ ಕೂತು ಊಟ ಮಾಡಿ ತಮ್ಮ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಶೆಹನಾಝ್ ಗಿಲ್​, ಗುರುವಾರ (ಅ.27) '48 ಹವರ್ಸ್ ಇನ್ ದುಬೈ' ಎಂಬ ಹೆಸರಿನ ವಿಡಿಯೋ​ ಒಂದನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಿದ್ದರು. ಈ ವಿಡಿಯೋದಲ್ಲಿ ಅವರು ದುಬೈ ರಸ್ತೆಗಳಲ್ಲಿ ದಿನಸಿ ಸಾಮಗ್ರಿಯನ್ನು ಖರೀದಿಸುವುದರಿಂದ ಹಿಡಿದು ನೆಲದಲ್ಲಿ ಕೂತು ಊಟ ಮಾಡುವುದೂ ಸೆರೆ ಆಗಿದೆ.

ವಿಡಿಯೋ ಯೂಟ್ಯೂಬ್​ನಲ್ಲಿ ಕಾಣಿಸಿಕೊಂಡ ಕೂಡಲೆ ಅಭಿಮಾನಿಗಳು ಹಾರ್ಟ್ ಇಮೋಜಿಯಿಂದ ಕಮೆಂಟ್ ವಿಭಾಗವನ್ನು ತುಂಬಿಸಿ ಬಿಟ್ಟರು. ಓರ್ವ ಅಭಿಮಾನಿ 'ಇವರು ತುಂಬಾ ಸರಳ ವ್ಯಕ್ತಿ. ಇವರಿಗೆ ಖಂಡಿತ ಉತ್ತಮ ಭವಿಷ್ಯವಿದೆ. ದೇವರ ಆಶೀರ್ವಾದ ಇವರ ಮೇಲೆ ಸದಾ ಇರಲಿ' ಎಂದು ಕಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್)