ಜರ್ಮನಿ: ಅಪ್ಫಾನಿಸ್ತಾನದ ಸಂವಹನ ಮತ್ತು ತಂತ್ರಜ್ಞಾನದ ಮಾಜಿ ಸಚಿವರಾಗಿದ್ದ ಸಯ್ಯದ್ ಅಮೀದ್ ಸಾದತ್ ಈಗ ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಸುದ್ದಿ ಸಂಸ್ಥೆಯೊಂದು ಹೊರಹಾಕಿದೆ.
ಈ ಮಾಹಿತಿಯನ್ನು ಅಲ್ ಜಜೀರಾ ಅರೇಬಿಯಾ ಸುದ್ದಿ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಅಫ್ಘಾನಿಸ್ತಾನ ತಾಲಿಬಾನಿಗಳ ಹಿಡಿತಕ್ಕೆ ಬರುವ ಮುಂಚೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ 2020ರಲ್ಲಿ ಅಫ್ಘಾನ್ನಿಂದ ಹೊರಬಂದಿದ್ದರು.
ಸೈಯದ್ ಅವರು ಮಂತ್ರಿಯಾಗಿದ್ದ ಸಮಯದಲ್ಲಿ ಅಪ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರೊಂದಿಗೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಇದರಿಂದಾಗಿ 2020ರಲ್ಲಿ ಸೈಯದ್ ಅಫ್ಫಾನ್ ದೇಶ ತೊರೆದು ಜರ್ಮನ್ನತ್ತ ತೆರಳಿದರು. ಸದ್ಯ ಅಲ್ಲೇ ನೆಲೆಸಿದ್ದು, ಲೀಪ್ಜಿಗ್ ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಸಯ್ಯದ್ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಎರಡು ಸ್ನಾತ್ತಕೋತ್ತರ ಪದವಿಯನ್ನು ಸಹ ಪಡೆದಿದ್ದಾರೆ.