ಶಿವಮೊಗ್ಗದಲ್ಲಿ ಪೌರ ಮಹಿಳಾ ಕಾರ್ಮಿಕರಿಗೆ ಎಂ.ಶ್ರೀಕಾಂತ್​ ಬಾಗಿನ ನೀಡಿ ಗೌರವಿಸಿದರು. ನಾಗರಾಜ್​ ಕಂಕಾರಿ, ಮಹೇಶ್ವರಪ್ಪ, ಪಾಲಾ, ವೇಣುಗೋಪಾಲ್​, ನಿರ್ಮಲಾ ಕಾಶಿ, ಗೋವಿಂದ ಮುಂತಾದವರಿದ್ದರು. 
ನ್ಯೂಸ್

ಪೌರ ಕಾರ್ಮಿಕರನ್ನು ಪ್ರತಿಯೊಬ್ಬರೂ ಗೌರವಿಸಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ನಗರವನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರ ಕೆಲಸದಿಂದ ಜನಪ್ರತಿನಿ-ಧಿಗಳಿಗೂ ಗೌರವ ಸಿಗುತ್ತದೆ. ಈ ಕಾರಣದಿಂದ ಪೌರ ಕಾರ್ಮಿಕರ ಸೇವೆಯನ್ನು ಗೌರವಿಸುವುದು ಅವಶ್ಯ ಎಂದು ಸದ್ಭಾವನಾ ಎಜುಕೇಷನ್​ ಮತ್ತು ಚಾರಿಟಬಲ್​ ಟ್ರಸ್ಟ್​ ಅಧ್ಯ ಎಂ.ಶ್ರೀಕಾಂತ್​ ಹೇಳಿದರು.

ದಸರಾ ಅಂಗವಾಗಿ ಸೋಮವಾರ ಪೌರ ಕಾರ್ಮಿಕರಿಗೆ ಬಾಗಿನ ನೀಡಿ ಅವರನ್ನು ಗೌರವಿಸಿ ಮಾತನಾಡಿದ ಅವರು, ಪ್ರತಿ ವರ್ಷ ಗೌರಿ ಹಬ್ಬದ ಸಂದರ್ಭದಲ್ಲಿ ಈ ಕಾರ್ಯ ಮಾಡಲಾಗುತ್ತಿತ್ತು. ಈ ವರ್ಷ ದಸರಾ ಸಂದರ್ಭ ಬಾಗಿನ ನೀಡಲು ತೀರ್ಮಾನಿಸಲಾಗಿತ್ತು ಎಂದರು.
ನಾನು 25 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಅಧಿಕಾರ ಇರಲಿ, ಇಲ್ಲದೇ ಇರಲಿ. ನೊಂದವರ ಪರವಾಗಿ ಕೆಲಸ ಮಾಡಬೇಕು ಎಂಬುದು ನನ್ನ ಆಶಯ. ಅದರ ಭಾಗವಾಗಿ ಈ ಕಾರ್ಯಕ್ರಮ ಆಯೋಜನೆಯಾಗಿದೆ. ಪೌರ ಕಾರ್ಮಿಕರು ಆರೋಗ್ಯದೆಡೆಗೆ ಹೆಚ್ಚು ಗಮನ ನೀಡಬೇಕು ಎಂದು ಹೇಳಿದರು.
ವೀರಶೈವ ಸಮಾಜದ ಮುಖಂಡ ಮಹೇಶ್ವರಪ್ಪ, ಪಾಲಿಕೆ ನೌಕರರ ಸಂದ ಅಧ್ಯಕ್ಷ ಎನ್​.ಗೋವಿಂದ ಮಾತನಾಡಿ, ಎಂ.ಶ್ರೀಕಾಂತ್​ ಅವರ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ನಗರಸಭೆ ಮಾಜಿ ಸದಸ್ಯೆ ನಿರ್ಮಲಾ ಕಾಶಿ, ಮಾಜಿ ಮೇಯರ್​ ನಾಗರಾಜ್​ ಕಂಕಾರಿ, ಮಾಜಿ ಉಪಮೇಯರ್​ ಪಾಲಾ, ಮಾಜಿ ಸದಸ್ಯ ರಾಜಣ್ಣ, ಪೌರ ಕಾರ್ಮಿಕರ ಸಂದ ಪ್ರಮುಖರಾದ ಪ್ರಕಾಶ್​, ಕುಮಾರ್​, ಮಂಜುನಾಥ್​, ಪಾಲಿಕೆ ಆರೋಗ್ಯಾಧಿ-ಕಾರಿ ವೇಣುಗೋಪಾಲ್​ ಮುಂತಾದವರಿದ್ದರು.