ನ್ಯೂಸ್

ಪಕ್ಷಿ ಸಂಕುಲ ಉಳಿಸಲು ಪ್ರತಿಯೊಬ್ಬರೂ ಮುಂದಾಗಬೇಕು

ರಾಣೆಬೆನ್ನೂರ: ಹಿಂದೆ ಮನೆಯಂಗಳದಲ್ಲಿ ಚಿಲಿಪಿಲಿ ಗುಟ್ಟುವ ಗುಬ್ಬಚ್ಚಿಗಳ ಇಂಚರ ಇಂದು ಕಾಣದಾಗಿದೆ. ಇದಕ್ಕೆ ಕಾರಣ ಪ್ರಾಣಿ ಪಕ್ಷಿಗಳಿಗೆ ಆಹಾರ ಹಾಗೂ ನೀರಿನ ಕೊರತೆ ಮತ್ತು ಮನುಷ್ಯನ ದುರಾಸೆ. ಪಕ್ಷಿ ಸಂಕುಲ ಇಂದು ಅಳಿವಿನ ಅಂಚಿನಲ್ಲಿದ್ದು ಅವುಗಳನ್ನು ಉಳಿಸಿ ಬೆಳೆಸುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕು ಎಂದು ಪ್ರಾಚಾರ್ಯ ಡಾ. ಎಂ.ಎಂ. ಮೃತ್ಯುಂಜಯ ಹೇಳಿದರು.

ನಗರದ ಬಿಎಜೆಎಸ್​ಎಸ್​ ಬಿ.ಇಡಿ ಕಾಲೇಜ್​ನ ಎನ್​ಎಸ್​ಎಸ್​ ಘಟಕದ ವತಿಯಿಂದ ಬುಧವಾರ ಏರ್ಪಡಿಸಿದ್ದ ಬಿಸಿಲಿನ ಬೇಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರು ಬೆಳೆದ ಬೆಳೆಗಳನ್ನು ಪ್ರಾಣಿ ಪಕ್ಷಿಗಳು ತಿಂದು ಬಿಡುತ್ತವೆ ಎಂದು ರೈತರು ಅಳವಡಿಸಿದ ಬಲೆಗೆ ಬಿದ್ದು ಸಾಯುತ್ತಿವೆ. ಇದರ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಮಕ್ಕಳಿರಲವ್ವ ಮನೆ ತುಂಬ ಎಂಬಂತೆ ಪಕ್ಷಿಗಳಿರಲವ್ವ ಮನೆ ಸುತ್ತ ಮುತ್ತ ಎಂಬ ತತ್ವವನ್ನು ಪ್ರಶಿಕ್ಷಣಾಥಿರ್ಗಳು ಬೆಳೆಸಿಕೊಳ್ಳಬೇಕು ಎಂದರು.

ಉಪನ್ಯಾಸಕರಾದ ಪರಶುರಾಮ ಪವಾರ, ಉಮಾ ಕಂಬಳಿ, ಬೀರಪ್ಪ ಲಮಾಣಿ, ಲಕ್ಷಿ$್ಮ ಹಣಚಿಕ್ಕಿ ಮತ್ತಿತರರು ಉಪಸ್ಥಿತರಿದ್ದರು.