ಜಿರಾಫೆ ಹೇಗೆ ಹುಲ್ಲು ತಿನ್ನುತ್ತದೆ? ತನ್ನ ಉದ್ದನೆಯ ಕತ್ತನ್ನು ಇನ್ನಷ್ಟು ಉದ್ದ ಮಾಡಿ ಮರದ ಎಲೆಗಳನ್ನು ತಿನ್ನುವುದು ಗೊತ್ತು..ಆದರೆ ಮುಂದಿನ ಉದ್ದನೆ ಕಾಲುಗಳನ್ನಿಟ್ಟುಕೊಂಡು, ಕತ್ತು ಬಗ್ಗಿಸಿ ಹೇಗೆ ಹುಲ್ಲು ತಿನ್ನುತ್ತದೆ..ಎಂಬುದನ್ನು ನೋಡಲು ಈ ವಿಡಿಯೋ ನೋಡಲೇ ಬೇಕು..
ಜಿರಾಫೆಯೊಂದು ಹುಲ್ಲು ತಿನ್ನುವ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು, ಅದನ್ನು ನೋಡಿದರೆ ನಿಮಗೂ ನಗು ಬಾರದೆ ಇರದು ! ಇದನ್ನೂ ಓದಿ: VIDEO| ವಾರದೊಳಗೆ 1 ಕೋಟಿಗೂ ಅಧಿಕ ವೀಕ್ಷಣೆ: ಹೈಸ್ಕೂಲ್ ವಿದ್ಯಾರ್ಥಿನಿಯ ಅಚ್ಚರಿಯ ವಿಡಿಯೋ!
ಏಳು ಸೆಕೆಂಡ್ಗಳ ವಿಡಿಯೋ ಇದಾಗಿದ್ದು, ತನ್ನ ಮುಂದಿನ ಎರಡೂ ಕಾಲುಗಳನ್ನು ವಿರುದ್ಧ ದಿಕ್ಕಿನಲ್ಲಿ ಬಾಗಿಸಿ, ಕತ್ತು ಬಗ್ಗಿಸಿ ಹುಲ್ಲು ತಿನ್ನುವುದನ್ನು ನೋಡಬಹುದು. ಥೇಟ್ ನಾವು ವರ್ಕೌಟ್ ಮಾಡಿದಂತೆ ಕಾಣುವ ವಿಡಿಯೋ ಸದ್ಯ ಇಂಟರ್ನೆಟ್ನಲ್ಲಿ ಆಕರ್ಷಣೆಯ ಕೇಂದ್ರವಾಗಿದೆ. ಎರಡೂ ಕಾಲನ್ನೂ ಥಟ್ ಎಂದು ವಿರುದ್ಧ ದಿಕ್ಕಿನಲ್ಲಿ ಬಾಗಿಸಿ..ಮತ್ತೆ ಸಾವಧಾನ್ ಸ್ಥಿತಿಯಲ್ಲಿ ನಿಲ್ಲುತ್ತದೆ. ಹೀಗೆ ಎರಡು ಮೂರು ಬಾರಿ ಮಾಡುವುದನ್ನು ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.
ಐಎಫ್ಎಸ್ ಅಧಿಕಾರಿ ಸುಧಾ ರಾಮನ್ ಎಂಬುವರು ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅನೇಕರು ಇದನ್ನು ಶೇರ್ ಮಾಡಿಕೊಂಡಿದ್ದಾರೆ. ನೆಟ್ಟಿಗರಂತೂ ತಮಗೆ ತೋಚಿದ ಕಾಮೆಂಟ್ಗಳನ್ನು ಬರೆದಿದ್ದಾರೆ. ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)