ನ್ಯೂಸ್

ನರಿಗಳೂ ಕಿಲಕಿಲನೆ ನಗುತ್ತವೆ...! ಅನುಮಾನವಿದ್ದರೆ ಈ ವಿಡಿಯೋ ನೋಡಿ...

lakshmihegde

ನರಿಗಳು ಯಾರಿಗೆ ಗೊತ್ತಿಲ್ಲ? ನರಿ ಎಂದರೆ ಕುತಂತ್ರ ಎಂಬುದೇ ಮನಸಿಗೆ ಬರುತ್ತದೆ. ಅನಾದಿ ಕಾಲದಿಂದಲೂ ನರಿಗಳನ್ನು ಕೆಟ್ಟ ಪ್ರಾಣಿಗಳೆಂದೇ ಬಿಂಬಿಸಲಾಗುತ್ತಿದೆ. ಅಲ್ಲೆಲ್ಲೋ ನರಿ ಊಳಿಟ್ಟರೆ ಅದು ಅಪಶಕುನ ಎಂದೂ ಹೇಳುವವರೂ ಇದ್ದಾರೆ.

ಆದರೆ ಇಂಥ ನರಿಗೂ ಸಖತ್​ ಕ್ಯೂಟ್​ ಆಗಿ ನಗಬಲ್ಲವು ಗೊತ್ತಾ? ನಂಬಿಕೆ ಬಾರದಿದ್ದರೆ ಕೆಳಗೆ ಇರುವ ವಿಡಿಯೋ ನೋಡಿ.

ಮಾಲಿಫ್​ಪ್ರಿನ್ಸ್​ ಎಂಬ ಟ್ವಿಟರ್​ ಬಳಕೆದಾರರು ನರಿಗಳು ನಗುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದೊಂದು ಹಳೇ ವಿಡಿಯೋ ಆಗಿದ್ದು, ಮತ್ತೊಮ್ಮೆ ವೈರಲ್​ ಆಗಿದೆ.

ಮೂರ್ನಾಲ್ಕು ನರಿಗಳು ನಗುವುದನ್ನು ವಿಡಿಯೋದಲ್ಲಿ ನೋಡಬಹುದು. ಅದರಲ್ಲೂ ಮನುಷ್ಯನೋರ್ವನ ಕೈಯಿ ಆ ಪ್ರಾಣಿಗಳ ಮೇಲೆ ಹರಿದಾಡುತ್ತಿದ್ದಂತೆ, ಅವು ಕಚಗುಳಿಯಾದಂತೆ, ಮುದ್ದಾಗಿ ನಗುತ್ತವೆ. ಈ ವಿಡಿಯೋ ಲಕ್ಷಕ್ಕೂ ಅಧಿಕ ಬಾರಿ ಶೇರ್​ ಆಗಿದೆ. (ಏಜೆನ್ಸೀಸ್​)