Business guidance questions and career path as a business person walking to a crossroad highway with two clouds shaped as arrows pointing in opposite directions on a blue summer sky and grass representing financial advice guide and looking for answers. 
ನ್ಯೂಸ್

ಜಗವು ಮರೆತರೂ, ನಾನು ಮರೆಯೆ

ಇದೊಂದು ಸಾಮತಿ. ಒಬ್ಬ ದೈವ ಭಕ್ತನಿದ್ದ. ಆತನಿಗೊಂದು ಕನಸು ಬಿತ್ತು. ಕನಸಲ್ಲಿ ಆತ ತನ್ನ ದೇವರ ಜೊತೆಗೆ ಸಮುದ್ರ ತೀರದ ಮರಳಿನಲ್ಲಿ ವಿಹರಿಸುತ್ತಿದ್ದಾನೆ. ಆಗ ಮರಳಿನ ಮೇಲೆ ಎರಡು ಜೋಡಿ ಮೆಟ್ಟಿಲುಗಳು ಕಾಣುತ್ತವೆ. ಒಂದು ದೇವರದ್ದು, ಇನ್ನೊಂದು ಆತನದ್ದು. ದೇವರೊಂದಿಗೆ ನಡೆಯುವಾಗ ಆಕಾಶದಲ್ಲಿ ಆತನ ಜೀವನದ ವಿವಿಧ ಸನ್ನಿವೇಶಗಳು ಕಾಣಸಿಗುತ್ತವೆ. ಮುಂದೆ ಮುಂದೆ ಹೋದಂತೆ ಆತನಿಗೆ ಮರಳಿನ ಮೇಲೆ ಒಂದೇ ಜೋಡಿ ಮೆಟ್ಟಲು ಕಾಣುತ್ತವೆ.

ಸೂಕ್ಷ್ಮವಾಗಿ ಗಮನಿಸಿದಾಗ ಅವು ಆತನ ಜೀವನದ ಕಷ್ಟ ಸಂಕಷ್ಟಗಳ ದಿನಗಳೆಂದು ದೃಶ್ಯಗಳು ಹೇಳುತ್ತವೆ. ಆಗ ಆತ ದೇವರಲ್ಲಿ ಕೇಳುತ್ತಾನೆ: ದೇವರೇ, ಈ ಜಗವು ಮರೆತರೂ, ನಾ ನಿನ್ನ ಮರೆಯೆನು ಎಂದು ಹೇಳಿದ್ದೀರಿ. ನಾನು ನಂಬಿದ್ದೆ. ಆದರೆ ನನ್ನ ಕಷ್ಟದ ಸಂದರ್ಭದಲ್ಲಿ ನೀವು ಎಲ್ಲಿದ್ದಿರಿ? ಆ ಸಂದರ್ಭದಲ್ಲಿ ನನ್ನ ಒಂದು ಜೋಡಿ ಮೆಟ್ಟಲುಗಳು ಮಾತ್ರ ಕಾಣುತ್ತಿವೆ’. ದೇವರು ಉತ್ತರಿಸುತ್ತಾರೆ: ಮಗನೇ, ನಾನು ನಿನ್ನನ್ನು ಎಂದಿಗೂ ಮರೆಯೆನು. ಒಬ್ಬ ತಾಯಿ ತಾನು ಹೆತ್ತ ಮಗುವನ್ನು ಮರೆತಾಳೇ? ಒಂದು ವೇಳೆ ಆಕೆ ಮರೆತರೂ ನಾನು ನಿನ್ನ ಮರೆಯೆನು. ನಿನ್ನ ಕಷ್ಟದ ದಿನಗಳಲ್ಲಿ, ನೀನು ಕಾಣುವ ಆ ಒಂದು ಜೋಡಿ ಮೆಟ್ಟಲು, ನಿನ್ನದಲ್ಲ ಮಗು. ಅವು ನನ್ನವು. ಆ ಸಂದರ್ಭದಲ್ಲಿ, ನಾನು ನಿನ್ನನ್ನು ನನ್ನ ಭುಜದ ಮೇಲೆ ಹೊತ್ತುಕೊಂಡಿದ್ದೆ’.

ನಿರಾಶೆ, ನಿರುದ್ಯೋಗ, ಭ್ರಷ್ಟಾಚಾರ, ಕೋಮು ದ್ವೇಷ, ವಿಭಜನೆ, ವಿವಾದ, ಮಾನವೀಯ ಮೌಲ್ಯಗಳ ಅವನತಿ ಇವೆಲ್ಲವನ್ನು ನೋಡುವಾಗ ನಮ್ಮ ಜೀವನದಲ್ಲಿಯೂ ಆ ಸಾಮತಿಯಂತೆ ದೇವರು ಹೇಳುತ್ತಾರೆ, ಭಯಪಡಬೇಡ. ನಾನು ನಿನ್ನ ಸಂಗಡ ಇದ್ದೇನೆ ಎಂಬುದಾಗಿ. ( ಪ್ರವಾದಿ ಯೆಶಾಯ 43: 2). ನಿರಾಶೆಯ ವಾತಾವರಣದಲ್ಲಿರುವ ನಾವು ದೇವರ ಈ ಭರವಸೆಯ ಮಾತುಗಳಲ್ಲಿ ವಿಶ್ವಾಸವಿಟ್ಟು ನೆಮ್ಮದಿಯಿಂದ ಬದುಕೋಣ ಹಾಗೂ ಇತರರನ್ನು ಬದುಕಲು ಬಿಡೋಣ.