ನ್ಯೂಸ್

ಸಣ್ಣ ಅವಕಾಶ ಸಿಕ್ಕರೂ ಅದನ್ನು ಉಪಯೋಗಿಸಿಕೊಳ್ಳುತ್ತೇನೆ; ಚಂದನ್​-ನಿವೇದಿತಾ ಡಿವೋರ್ಸ್​ ಕುರಿತು ಶಾಕಿಂಗ್​ ಹೇಳಿಕೆ ಕೊಟ್ಟ ಖ್ಯಾತ ನಟ

ಬೆಂಗಳೂರು: ಸ್ಯಾಂಡಲ್​ವುಡ್​ನ ದಿ ಮೋಸ್ಟ್​ ಕ್ಯೂಟೆಸ್ಟ್​ ಕಪಲ್​ ಎಂದೇ ಖ್ಯಾತಿ ಪಡೆದಿದ್ದ ರ್‍ಯಾಪರ್​ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯುವ ಮೂಲಕ ಹಲವರಿಗೆ ಶಾಕ್​ ನೀಡಿದ್ದಾರೆ. ಯಾವ ಕಾರಣಕ್ಕಾಗಿ ವಿಚ್ಛೇದನ ಪಡೆಯುತ್ತಿರುವುದಾಗಿ ಈ ಇಬ್ಬರು ತಿಳಿಸಿಲ್ಲ. ತುಂಬಾ ಅನ್ಯೋನ್ಯವಾಗಿದ್ದ ದಂಪತಿ ದಿಢೀರ್​ ಎಂದು ವಿಚ್ಛೇದನ ಪಡೆಯುತ್ತಿರುವುದು ಹಲವು ರೀತಿಯ ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದ್ದು, ಈ ಬಗ್ಗೆ ಸ್ಯಾಂಡಲ್​ವುಡ್​ನ ಖ್ಯಾತ ನಟರೊಬ್ಬರು ನೀಡಿರುವ ಹೇಳಿಕೆ ಚಂದನ್​ ನಿವೇದಿತಾ ದಾಂಪತ್ಯಕ್ಕೆ ಯಾರಾದರೂ ಹುಳಿ ಹಿಂಡಿದರಾ ಎಂಬ ಪ್ರಶ್ನೆ ಮೂಡಲು ಶುರುವಾಗಿದೆ.

ಈ ಕುರಿತು ಮಾತನಾಡಿರುವ ನಟ, ನಿರ್ದೇಶಕ ಪ್ರಥಮ್​, ಹಾಗೇನಾದರೂ ಇವರಿಬ್ಬರ ಸಂಸಾರವನ್ನು ಸರಿ ಮಾಡುವ ಸಣ್ಣ ಅವಕಾಶ ಸಿಕ್ಕರೂ ಅದನ್ನು ಉಪಯೋಗಿಸಿಕೊಳ್ಳುತ್ತೇನೆ. ನಿವೇದಿತಾ ಗೌಡ ನನಗೆ ಆತ್ಮೀಯ ಸ್ನೇಹಿತೆಯಲ್ಲ. ಆದರೆ, ಪರಿಚಿತರು. ಸಣ್ಣ ಹುಡುಗಿ, ಬುದ್ದಿವಾದ ಹೇಳಿದರೆ, ಕೇಳಬಹುದು ಎನ್ನುವ ವಿಶ್ವಾಸ ನನಗಿದೆ ಎಂದು ಪ್ರಥಮ್‌ ಹೇಳಿದ್ದಾರೆ.

ಹಾಗೇನಾದರೂ ಮಾತನಾಡಿ ಬಗೆಹರಿಸಿಕೊಳ್ಳಬಹುದಾಗಿದ್ದರೆ, ನನ್ನೊಂದಿಗೆ ಧ್ರುವ ಸರ್ಜಾ ಅವರ ಸಹಾಯವನ್ನೂ ತೆಗೆದುಕೊಳ್ಳುತ್ತೇನೆ. ಧ್ರುವ ಹಾಗೂ ಚಂದನ್‌ ಆತ್ಮೀಯ ಸ್ನೇಹಿತರು. ಚಂದನ್ ಹಾಗು ನಿವೇದಿತಾ ನಡುವೆ ಯಾರೋ ಹುಳಿ ಹಿಂಡಿದ್ದಾರೆ. ಅವರು ನಿಜವಾಗಲೂ ಉದ್ಧಾರ ಆಗಲ್ಲ, ಅವರಿಗೆ ಒಳ್ಳೆದಾಗಲ್ಲ. ಈ ಜೋಡಿ ಮತ್ತೆ ಒಂದಾಗಬೇಕು. ನಾನು ಧ್ರುವ ಸರ್ಜಾ ಅವರಿಂದ ಫೋನ್ ಮಾಡಿಸಿ ಒಮ್ಮೆ ಒಂದು ಮಾಡೋ ಪ್ರಯತ್ನ ಮಾಡುತ್ತೇನೆ.

ಚಂದನ್​ ಶೆಟ್ಟಿಗೆ ಪುನೀತ್ ಅವರ ಮಿಲನ ಸಿನಿಮಾ ನೋಡುವಂತೆ ಹೇಳುತ್ತೇನೆ.ಅದನ್ನ ನೋಡಿ ಅವರು ಹೋಗಿ ಅಪ್ಪು ಅವರು ಪಾರ್ವತಿನಾ ಅಪ್ಪಿಕೊಂಡ ಹಾಗೇ ನಿವೇದಿತಾನ ಹಗ್ ಮಾಡಿ ಒಂದಾಗಬೇಕು. ಚಂದನ್ ಹಾಗೂ ನಿವೇದಿತಾ ಡಿವೋರ್ಸ್​ನಿಂದ ಕೆಲವರು ಸಂಭ್ರಮ ಪಟ್ಟಿರುತ್ತಾರೆ. ಅದಕ್ಕೆ ಆಸ್ಪದ ಕೊಡಬಾರದು ಎಂದು ನಟ ಪ್ರಥಮ್​ ಅಭಿಪ್ರಾಯಪಟ್ಟಿದ್ದಾರೆ.