ಕಂಪಲಾಪುರ: ದಾಸಶ್ರೇಷ್ಠ ಭಕ್ತ ಕನಕದಾಸರ ತತ್ವಗಳು, ಕೀರ್ತನೆಗಳು ಎಷ್ಟು ಶತಮಾನ ಕಳೆದರೂ ಜೀವಂತ ಎಂದು ಸರ್ಕಾರಿ ಪ್ರೌಢಶಾಲೆ ಹಿರಿಯ ಶಿಕ್ಷಕಿ ಶಾರದಮ್ಮ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಸ್ರ ವರ್ಷಗಳು ಕಳೆದರೂ ಭಾರತದ ಹಿರಿಮೆಯನ್ನು ಅಳಿಸಲು ಸಾದ್ಯವಿಲ್ಲ. ಯಾಕೆಂದರೆ ಈ ಮಣ್ಣಿನಲ್ಲಿ ಅಂತಹದೊಂದು ಶಕ್ತಿ ಇದೆ. ಭಕ್ತಿಯ ನೆಲೆಗಟ್ಟಿನಲ್ಲಿ ದೇಶ ನಿಂತಿದೆ. ಕನ್ನಡ ಸಾಹಿತ್ಯದಲ್ಲಿ ಮೂರು ವಿಭಾಗಗಳಿದ್ದು ಜೈನ ಸಾಹಿತ್ಯ , ಶರಣಸಾಹಿತ್ಯ , ದಾಸ ಸಾಹಿತ್ಯ ವಿದ್ದು ಕನಕದಾಸರು ಷಟ್ಪದಿ , ದಾಸ ಸಾಹಿತ್ಯ ದಲ್ಲಿ ಕೀರ್ತನೆಗಳನ್ನು ಬರೆದಿದ್ದಾರೆ , ಜೊತೆಗೆ ಮುಂಡಿಗೆ ಸಾಹಿತ್ಯಪ್ರಕಾರವನ್ನು ಬರೆದಕೀರ್ತಿ ಇವರಿಗೆ ಸಲ್ಲುತ್ತೆ ಎಂದರು.
ಮುಖ್ಯ ಶಿಕ್ಷಕ ಮಹದೇವಯ್ಯ, ಶಿಕ್ಷಕ ಸಂಜಯ್, ಎಸ್‌ಡಿಎಂಸಿ ಅಧ್ಯಕ್ಷ ಸದಾಶಿವ ಅವರು ಕನಕ ಜಯಂತಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕಿ ಪೂರ್ಣಿಮಾ ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಕನಕದಾಸರ ಕೀರ್ತನೆಗಳನ್ನು ಹಾಡಿದರು. ಇದೇ ಎಸ್‌ಡಿಎಂಸಿ ಸದಸ್ಯ ರಾಜೇಶ್, ಶಹಜಾನ್, ಶಿಕ್ಷಕರಾದ ಪ್ರಸನ್ನ, ಮಹೇಶ್, ಗೀತಾ, ಸುಜಾತಾ, ಭಾಗ್ಯಾ, ಭಾವನಾ, ಗಿರಿಜಾ, ಶಾಲಿನಿ ಮತ್ತಿತರರು ಹಾಜರಿದ್ದರು.