ಶಿವಮೊಗದಲ್ಲಿಯೇ ಹೈಕೋರ್ಟ್ ಸಂಚಾರ ಪೀಠ ಸ್ಥಾಪನೆಗಾಗಿ ಹೊಸನಗರದಲ್ಲಿ ವಕೀಲರು ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು. ಚಂದ್ರಪ್ಪ, ಷಣ್ಮುಖಪ್ಪ, ಕೆ.ಬಿ.ಪ್ರಶಾಂತ್, ಹಿರಿಯಪ್ಪ, ರಘುನಂದನ್ ಇತರರಿದ್ದರು. 
ನ್ಯೂಸ್

ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಿ

ಅನಿರ್ದಿಷ್ಟಾವಧಿ ಧರಣಿ ಆರಂಭ

ಹೊಸನಗರ: ಮಧ್ಯಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರ ಪೀಠ ಸ್ಥಾಪನೆಯಾಗಬೇಕು ಎಂದು ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಗುರುವಾರ ವಕೀಲರ ಸಂಘದ ಪದಾಧಿಕಾರಿಗಳು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಬೆಂಗಳೂರಿಗೆ ಹೋಗಲು 350 ಕಿ.ಮೀ ಕ್ರಮಿಸಬೇಕು. ಇದರಿಂದಾಗಿ ನ್ಯಾಯಕ್ಕಾಗಿ ಅಲೆದಾಟದಿಂದ ತೊಂದರೆಯಾಗಿದೆ. ಶಿವಮೊಗ್ಗದಲ್ಲಿ ಪೀಠ ಸ್ಥಾಪನೆಯಾದರೆ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಉತ್ತರಕನ್ನಡ ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. ಬೆಂಗಳೂರು ರಾಜ್ಯದ ಗಡಿಭಾಗದಲ್ಲಿದೆ. ಇದರಿಂದ ಮಧ್ಯ ಕರ್ನಾಟಕ ನ್ಯಾಯಾಲಯ ಸೇವೆಗಾಗಿ ಪರದಾಡಬೇಕಿದೆ. ಹೀಗಾಗಿ ಶಿವಮೊಗ್ಗದಲ್ಲಿ ಸಂಚಾರ ಪೀಠ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದರು.

ವಕೀಲರ ಸಂಘದ ಅಧ್ಯಕ್ಷ ಚಂದ್ರಪ್ಪ, ಹಿರಿಯ ವಕೀಲರಾದ ಷಣ್ಮುಖಪ್ಪ, ಕೆ.ಬಿ.ಪ್ರಶಾಂತ್, ಹಿರಿಯಪ್ಪ, ವಾಲೆಮನೆ ಶಿವಕುಮಾರ್, ಬಿ.ಎಸ್.ವಿನಾಯಕ, ವಿಜಯ್, ಈರಪ್ಪ, ಗುರುಕಿರಣ್, ರಘುನಂದನ್, ರಾಮಚಂದ್ರ, ಲೋಕೇಶ್, ಮಹೇಶ್, ಗುರು ಮಂಡಾನಿ, ಬಸವರಾಜ್, ಉಮೇಶ್, ವಿನಯ್, ಬಿಂದು ಉಪಸ್ಥಿತರಿದ್ದರು.