ಬೆಂಗಳೂರು: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಸೇರಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸುವ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ತಡೆಗಟ್ಟಲು ‘ಡ್ರೋನ್ ಕ್ಯಾಮೆರಾ’ ಅಳವಡಿಸಲು ಮುಂದಾಗಿದೆ.
ಇದೇ ಮೊದಲ ಬಾರಿಗೆ ಇಂತಹ ಪ್ರಯತ್ನಕ್ಕೆ ಮುಂದಾಗಿದೆ. ಡ್ರೋನ್‌ಗಳನ್ನು ಬಾಡಿಗೆ ಪಡೆದು ಪರೀಕ್ಷಾ ನಕಲು ನಡೆಯದಂತೆ ಮಾಡಬೇಕೆಂದು ನಿರ್ಧರಿಸಿದೆ.
ಮಂಡಳಿಯು ಇತ್ತೀಚಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಉನ್ನತ ಮಟ್ಟದ ಅ??ಕಾರಿಗಳು ಭಾಗಿಯಾಗಿ ಹಲವು ಸಲಹೆಗಳನ್ನು ನೀಡಿದರು.
ಈ ಸಲಹೆ ಆಧರಿಸಿ ಬೆಂಗಳೂರು ಉತ್ತರ ಜಿಲ್ಲೆಯ ಉಪನಿರ್ದೇಶಕರು ಸುತ್ತೋತೆ ಹೊರಡಿಸಿದ್ದು, ಹೋಬಳಿ ಮತ್ತು ತಾಲೂಕು ಹಂತದಲ್ಲಿ ಹೆಚ್ಚಿನ ಸಾಮರ್ಥ್ಯ ಇರುವ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಬೇಕು. ಅದೇ ರೀತಿ ನೆಲ ಮಹಡಿಯ ಬದಲಾಗಿ ಮೊದಲನೇ ಮಹಡಿಯಲ್ಲಿ ಪರೀಕ್ಷೆ ನಡೆಸಬೇಕು. ಪರೀಕ್ಷಾ ಕೇಂದ್ರಗಳಿಗೆ ಸ್ಥಾನಿಕ ಜಗೃತ ದಳದ ಅಕಾರಿಯನ್ನು ನೇಮಿಸುವಾಗ ಗ್ರಾಮ ಲೆಕ್ಕಿಗರು, ಪಿಡಿಒ ಸೇರಿದಂತೆ ಇತರೆ ಅಧಿಕಾರಿಗಳನ್ನು ನೇಮಿಸಬೇಕೆಂದು ಸೂಚಿಸಿದ್ದಾರೆ.
ಇದರೆ ಜತೆಗೆ ಪ್ರಶ್ನೆ ಪತ್ರಿಕೆಗಳ ಬಂಡಲ್ ತೆರೆಯುವುದನ್ನು ಮತ್ತು ಕೊನೆಯಲ್ಲಿ ಸೀಲ್ ಮಾಡುವುದನ್ನು ವೆಬ್ ಕಾಸ್ಟಿಂಗ್ ಮಾಡಬೇಕು. ಅದೇ ರೀತಿ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಬಾಡಿಗೆ ಆಧಾರದ ಮೇಲೆ ಡ್ರೋನ್ ಕ್ಯಾಮೆರಾ ಅಳವಡಿಸಿ ನಕಲು, ಅಕ್ರಮಗಳನ್ನು ನಡೆಯದಂತೆ ಮಾಡಬೇಕೆಂದು ಸೂಚಿಸಿದ್ದಾರೆ.
ಈ ಎಲ್ಲ ಸೂಚನೆಗಳನ್ನು ಕ್ಷೇತ್ರ ಶಿಕ್ಷಣಾಕಾರಿಗಳು ಉಸ್ತುವಾರಿ ಮಾಡಬೇಕೆಂದು ಜಿಲ್ಲಾ ಉಪನಿರ್ದೇಶಕರು ತಿಳಿಸಿದ್ದಾರೆ. ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆ ಶಿಕ್ಷಣ ವಲಯದಲ್ಲಿ ಉದ್ಭವಿಸಿದೆ.
ಈ ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಸೇರಿದಂತೆ ಇತರೆ ಅಕಾರಿಗಳು ಭಾಗವಹಿಸಿದ್ದರು.
ಇತರೆ ಪ್ರಮುಖ ಸಲಹೆಗಳು
- ವಿದ್ಯಾರ್ಥಿಗಳು, ಪಾಲಕರು ಪರೀಕ್ಷೆಗೆ ಸಂಬಂಧಿಸಿದ ಕಾರ್ಯದಲ್ಲಿ ಭಾಗಿಯಾಗಬಾರದು
- ವಿದ್ಯಾರ್ಥಿಗಳಿಗೆ ಪರೀಕ್ಷಾ ಪಾವಿತ್ರತೆಯ ಬಗ್ಗೆ ಅರಿವು ಮೂಡಿಸುವುದು
- ಪ್ರಶ್ನೆ ಪತ್ರಿಕೆಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸುವುದು
- ಹೆಚ್ಚು ಲಿತಾಂಶ ಪಡೆಯಲು ಶಿಕ್ಷಕರು ಒತ್ತಡ ತಾರದಂತೆ ನೋಡಿಕೊಳ್ಳವುದು
- ನೀಟ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ವಸಸಂಹಿತೆ ಜಾರಿ ಮಾಡುವುದು