ನ್ಯೂಸ್

ಬೇಹುಗಾರಿಕೆ ಪ್ರಕರಣ: ಯೂಟ್ಯೂಬರ್‌ ಜ್ಯೋತಿ ಮಲ್ಹೋತ್ರಾಗೆ 4 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದ ನ್ಯಾಯಾಲಯ| Police custody

ಹಿಸಾರ್: ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು 4 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಹರಿಯಾಣದ ಹಿಸಾರ್ ಜಿಲ್ಲಾ ನ್ಯಾಯಾಲಯ ಇಂದು (22) ಆದೇಶ ಹೊರಡಿಸಿದೆ.

ಪ್ರಮುಖ ಭದ್ರತಾ ಕಾರ್ಯಾಚರಣೆಯೊಂದರಲ್ಲಿ, ಭಾರತೀಯ ಗುಪ್ತಚರ ಸಂಸ್ಥೆಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯರಾಗಿರುವ ಹರಿಯಾಣದ ಜನಪ್ರಿಯ ಮಹಿಳಾ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧನ ಮಾಡಲಾಗಿದೆ.

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ISI) ಜೊತೆ ಸಂಬಂಧ ಹೊಂದಿರುವ ಡ್ಯಾನಿಶ್ ಎಂದು ಗುರುತಿಸಲಾದ ಪಾಕಿಸ್ತಾನಿ ಹೈಕಮಿಷನ್ ಉದ್ಯೋಗಿಯೊಬ್ಬರು ಜ್ಯೋತಿಯನ್ನು ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ತನಿಖೆಯಲ್ಲಿ ಈ ವರ್ಷದ ಏಪ್ರಿಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಮೂರು ತಿಂಗಳ ಮೊದಲು ಜ್ಯೋತಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ಗೆ ಭೇಟಿ ನೀಡಿದ್ದರು ಎಂಬುದಾಗಿ ತಿಳಿದು ಬಂದಿದೆ.

ಪೊಲೀಸ್​ ಅಧಿಕಾರಿ ಹೇಳಿದ್ದೇನು?

(ಏಜೆನ್ಸೀಸ್)

ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪುರಿಯ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಅದರ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಪೋಸ್ಟ್ ಮಾಡಿದ್ದಾರೆ ಎಂಬ ಮಾಹಿತಿ ಇದೀಗ ನಮಗೆ ಬಂದಿದೆ. ಅವರು ಚಿಲಿಕಾ ಮತ್ತು ಕೊನಾರ್ಕ್‌ಗೆ ಸಹ ಭೇಟಿ ನೀಡಿದ್ದರು. ಅವರು ಒಡಿಶಾದ ಯೂಟ್ಯೂಬರ್ ಪ್ರಿಯಾಂಕಾ ಸೇನಾಪತಿ ಅವರೊಂದಿಗೆ ಸಂಪರ್ಕದಲ್ಲಿದ್ದರು. ನಾವು ಎಲ್ಲಾ ಸಂಗತಿಗಳನ್ನು ಪರಿಶೀಲಿಸುತ್ತಿದ್ದೇವೆ. ಜ್ಯೋತಿ ಮಲ್ಹೋತ್ರಾ ಕುರಿತು ಹರಿಯಾಣದಲ್ಲಿರುವ ಕೆಲ ಸಂಸ್ಥೆಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.