ಶಿವಮೊಗ್ಗ: ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸುವ ವಿಚಾರದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬೆಂಬಲವೂ ಇತ್ತು ಎಂದು ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ ತಿಳಿಸಿದರು.
ರಾಘವೇಂದ್ರ ಅವರ ಹೆಸರು ಕಳಿಸುವುದಕ್ಕೆ ಈಶ್ವರಪ್ಪ ಒಮ್ಮತವೂ ಇತ್ತು ವರಿಷ್ಠರು ಕೇಳುವ ಮುಂಚೆಯೇ ರಾಘವೇಂದ್ರ ಹೆಸರನ್ನು ಸರ್ವಾನುಮತದಿಂದ ಕೇಂದ್ರಕ್ಕೆ ಕಳಿಸಲಾಗಿತ್ತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರ ಕಳೆದ 10 ವರ್ಷದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ, ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದೆ. ದೇಶದ ರಕ್ಷಣೆ, ಹಿಂದುಗಳ ರಕ್ಷಣೆ, ಜನ ಕಲ್ಯಾಣ ಅನುಷ್ಠಾನಗಳ ಬಗ್ಗೆ ಜನರಿಗೆ ಅರಿವಿದೆ. 2014ರಿಂದ ಕೇಂದ್ರ ಸರ್ಕಾರ ಕೊಟ್ಟ ನೂರಾರು ಯೋಜನೆಗಳಿವೆ ಎಂದರು.