ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ 50 ದಿನಗಳನ್ನು ಪೂರೈಸಿ 100 ದಿನಗಳತ್ತ ಭರ್ಜರಿ ಓಟವನ್ನು ಮುಂದುವರೆಸಿದೆ. ಇದಕ್ಕೂ ಮುನ್ನ ಏಳನೇ ವಾರದಲ್ಲಿ ನಡೆದ ಡಬಲ್ ಎಲಿಮಿನೇಷನ್ ರೌಂಡ್ ಪೈಕಿ ಮೊದಲಿಗೆ ಮನೆಯಿಂದ ಹೊರಬಂದ ಗಾಯಕಿ ಇಶಾನಿ, ಇತ್ತೀಚೆಗೆ ವಿಜಯವಾಣಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ, ಬಿಗ್ ಮನೆಯೊಳಗಿನ ಬಿಗ್ ವಿಚಾರಗಳನ್ನು ಬಹಿರಂಗವಾಗಿ ವೀಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕೆಟಿಆರ್ ಮಾಮಾ… ಹೈದರಾಬಾದ್ಗೆ ಡಿಸ್ನಿಲ್ಯಾಂಡ್ ತರಬಹುದೇ? ತೆಲಂಗಾಣ ಸಚಿವರಿಗೆ ಬಾಲಕಿಯ ಮುದ್ದಾದ ಬೇಡಿಕೆ
ಮನೆಯಲ್ಲಿ ಗ್ರೂಪಿಸಮ್ ಬಗ್ಗೆ ಮಾತನಾಡಿದ ಇಶಾನಿ, "ನನ್ನ ಪ್ರಕಾರ ಪ್ರಾರಂಭದಲ್ಲಿ ನನಗೇನೂ ಆ ರೀತಿ ಅನಿಸಲಿಲ್ಲ. ಯಾರು ಯಾರ ಜತೆ ಇರುತ್ತಾರೋ ಅದರ ಮೇಲೆ ಗುಂಪೊಂದು ರಚನೆಯಾಗಿತ್ತು. ಒಂದು ಕಡೆ ನಿಜಕ್ಕೂ ಕೆಟ್ಟ ಗ್ರೂಪಿಸಮ್ ಇತ್ತು. ಅದನ್ನು ಸುದೀಪ್ ಸರ್ ಕೂಡ ಗಮನಿಸಿದ್ದರು. ನಾನು ವಿನಯ್, ಸ್ನೇಹಿತ್, ಮೈಕಲ್, ನಮ್ರತಾ ಅವರೊಂದಿಗೆ ಹೆಚ್ಚು ಬೆರೆತು ಮಾತನಾಡುತ್ತಿದ್ದೆ" ಎಂದರು.
ಇನ್ನು ಬಿಗ್ ಬಾಸ್ ಮನೆಯೊಳಗೆ ಹೋಗಲು ಬಟ್ಟೆ ಖರೀದಿ ಸೇರಿದಂತೆ ಇತರೆ ವಸ್ತುಗಳಿಗೆ ಖರ್ಚು ಮಾಡಿದ ಒಟ್ಟು ಹಣವೆಷ್ಟು ಎಂಬ ಪ್ರಶ್ನೆಗೆ ಉತ್ತರಿಸಿದ ಇಶಾನಿ, "ಎಷ್ಟು ಖರ್ಚಾಗಿದೆ ಎಂಬುದು ನನಗೆ ತಿಳಿದಿಲ್ಲ, ಅದೆಲ್ಲಾ ನನ್ನ ತಂಡಕ್ಕೆ ಗೊತ್ತಿದೆ. ಆದ್ರೆ, ಒಟ್ಟಾರೆ ಎಂದರೆ".... ಮತ್ತಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನು ತಿಳಿಯಲು ಕೆಳಗಿನ ಸಂದರ್ಶನದ ವಿಡಿಯೋ ಕ್ಲಿಕ್ ಮಾಡಿ ವೀಕ್ಷಿಸಿ.