ಶೂಟಿಂಗ್​ ವಿಶ್ವಕಪ್​: ಈಶಾ ಸಿಂಗ್​ಗೆ ಚಿನ್ನ, ಮನು ಭಾಕರ್​ಗೆ ಕಂಚು 
ನ್ಯೂಸ್

ಶೂಟಿಂಗ್​ ವಿಶ್ವಕಪ್​: ಈಶಾ ಸಿಂಗ್​ಗೆ ಚಿನ್ನ, ಮನು ಭಾಕರ್​ಗೆ ಕಂಚು

ಹಾಂಗ್​ರೆೌ: ಉದಯೋನ್ಮುಖ ಶೂಟರ್​ ಈಶಾ ಸಿಂಗ್​, ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಮನು ಭಾಕರ್ (Manu Bhaker)​ ಅವರನ್ನು ಬದಿಗೊತ್ತುವ ಮೂಲಕ ಐಎಸ್​ಎಸ್​ಎಫ್​​ ವಿಶ್ವಕಪ್​ನ (ISSF World Cup ) ಮಹಿಳೆಯರ 25 ಮೀ. ಪಿಸ್ತೂಲ್​ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಮನು ಭಾಕರ್​ ಕಂಚಿನ ಪದಕಕ್ಕೆ ತೃಪ್ತಿಪಟ್ಟರೆ, ಭಾರತ ಒಂದೇ ವಿಭಾಗದಲ್ಲಿ ಅವಳಿ ಪದಕ ಬಾಚಿಕೊಂಡ ಸಾಧನೆ ಮಾಡಿತು.

21 ವರ್ಷದ ಈಶಾ ಸಿಂಗ್​ ಫೈನಲ್​ನಲ್ಲಿ ಬಲಿಷ್ಠ ನಿರ್ವಹಣೆ ತೋರುವ ಮೂಲಕ ಗಮನಸೆಳೆದರು. ಅವರು 40 ಹಿಟ್ಸ್​ನೊಂದಿಗೆ ಚಿನ್ನ ಗೆದ್ದರೆ, 24 ವರ್ಷದ ಮನು 27 ಹಿಟ್ಸ್​ನೊಂದಿಗೆ ಕಂಚು ಜಯಿಸಿದರು.

ಇದಕ್ಕೆ ಮುನ್ನ ಅರ್ಹತಾ ಸುತ್ತಿನಲ್ಲಿ ಹರಿಯಾಣದ ಮನು 586 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದರೆ, ಹೈದರಾಬಾದ್​ನ ಈಶಾ 585 ಅಂಕದೊಂದಿಗೆ 2ನೇ ಸ್ಥಾನ ಗಳಿಸಿದ್ದರು. ಈಶಾ ಇದಕ್ಕೆ ಮುನ್ನ ಮ್ಯೂನಿಚ್​ ವಿಶ್ವಕಪ್​ನಲ್ಲಿ 43 ಹಿಟ್ಸ್​ಗಳ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದರು.