ನ್ಯೂಸ್

ನನ್ನ ಬಿಳಿಯ ಚರ್ಮಕ್ಕಾಗಿ 90 ಸಾವಿರ ಬೆಲೆಯ ಇಂಜೆಕ್ಷನ್​​ ಪಡೆದಿದ್ದೇನೆ: ಚರ್ಮ ಹೊಳಪಿನ ರಹಸ್ಯ ಬಿಚ್ಚಿಟ್ಟ ನಟಿ ಈಶಾ ಗುಪ್ತಾ

ಮುಂಬೈ: ಚಿತ್ರದ ನಾಯಕಿಯರು ಎಂದಾಕ್ಷಣ ತೆಳ್ಳಗಿನ ದೇಹ, ಹೊಳಪು ಚರ್ಮದ ಮೈಮಾಟ ಹೊಂದಿರುವವರಿಗೆ ಬೇಡಿಕೆ ಇರುವುದು ಸಹಜ. ಆದರೆ ತಮ್ಮ ಚರ್ಮದ ಬಣ್ಣದಿಂದ ಹಲವು ಬಾರಿ ಅವಮಾನಕ್ಕೊಳಗಾಗಿದ್ದೆ ಎಂಬ ವಿಷಯವನ್ನು ಬಾಲಿವುಡ್​ ನಟಿ ಈಶಾ ಗುಪ್ತಾ ಹಂಚಿಕೊಂಡಿದ್ದಾರೆ.

2012ರಲ್ಲಿ ಜನ್ನತ್​​ 2 ಸಿನಿಮಾ ಮೂಲಕ ಬಾಲಿವುಡ್​​ಗೆ ಪಾದಾರ್ಪಣೆ ಮಾಡಿದ್ದ ಈಶಾ ಗುಪ್ತಾ ಆರಂಭದ ದಿನಗಳಲ್ಲಿ ತನ್ನ ಮೈ ಬಣ್ಣದಿಂದ ಸಾಕಷ್ಟು ಮುಜುಗರ ಅನುಭವಿಸಿದ್ದೇನೆ. ನೀನು ತುಂಬಾ ಕಪ್ಪು ಎಂದು ಹೇಳುತ್ತಿದ್ದರು. ಇದರಿಂದ ನಾನು ಸಾಕಷ್ಟು ಅವಕಾಶವನ್ನೂ ಕಳೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.

ಸಿನಿಮಾಗೆ ಆಗಷ್ಟೇ ಕಾಲಿಟ್ಟ ನನ್ನ ಬಳಿ ಹಣವೂ ಇರಲಿಲ್ಲ. ಚರ್ಮದ ಬಣ್ಣ ಬದಲಾಯಿಸಲು ಎಷ್ಟಾಗಬಹುದು ಎಂದು ಕೇಳಿದ್ದಕ್ಕೆ ಅದರ ಬೆಲೆ ನೋಡಿಯೇ ತಲೆ ತಿರುಗುವಂತಾಯಿತು. ಬರೋಬ್ಬರಿ ಆದರೂ 90,000 ರೂ.ಗಳನ್ನು ಖರ್ಚು ಮಾಡಿ ತನ್ನ ಚರ್ಮದ ಬಣ್ಣ ಬದಲಿಸಲು ಪ್ರಯತ್ನಿಸಿದ್ದೇ ಎಂದು ಈಶಾ ತಮ್ಮ ಚರ್ಮದ ಹೊಳಪಿಗಾಗಿ ತಾವು ತೆಗೆದುಕೊಂಡಿದ್ದ ನಿರ್ಧಾರದ ಬಗ್ಗೆ ವಿವರಿಸಿದ್ದಾರೆ.

ಸಿನಿಮಾದಲ್ಲಿ ನಟನೆಗೆ ಅವಕಾಶ ಕೊಡುತ್ತೇವೆ ಎಂದು ಹೇಳುತ್ತಿದ್ದ ನಿರ್ದೇಶಕರೂ ಕೂಡ ನೀವು ನಿಮ್ಮ ಚರ್ಮದ ಬಣ್ಣ ಬದಲಾಯಿಸಬೇಕೆಂದು ಹೇಳುತ್ತಿದ್ದರು. ಕೆಲವರಿಂದ ಸಾಕಷ್ಟು ಬಾರಿ ನಿಮ್ಮ ಮೂಗಿನ ಆಕಾರವೂ ಸರಿಯಿಲ್ಲ ಎಂಬುದನ್ನು ಕೇಳಿದ್ದೇನೆ ಎಂದು ಈಶಾ ಹೇಳಿದ್ದಾರೆ.

ಸದ್ಯ ಆಶ್ರಮ್​​ 3 ವೆಬ್​​ಸಿರೀಸ್​​ನಲ್ಲಿ ನಟಿಸಿರುವ ಈಶಾ ಗುಪ್ತಾ ಸಿನಿಮಾ ರಂಗಕ್ಕೆ ಕಾಲಿಟ್ಟ ಆರಂಭದ ದಿನಗಳ ಕಹಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. (ಏಜೆನ್ಸೀಸ್​)