ಕೋಲಾರ ತಾಲೂಕಿನ ಯಲವಾರ, ಮಾರ್ಜೇನಹಳ್ಳಿ ಗ್ರಾಮದಲ್ಲಿ ವಿವಿಧ ಸಂಸಂಸ್ಥೆಗಳಿಂದ ಬುಧವಾರ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜೋಸಫ್ ಚಾಲನೆ ನೀಡಿದರು.  
ನ್ಯೂಸ್

ಪರಿಸರ ರಕ್ಷಣೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ

ಕಿರುವಾರ ಎಸ್.ಸುದರ್ಶನ್

ಕೋಲಾರ: ಪ್ರಕೃತಿ ವಿಕೋಪಗಳಿಗೆ ಕಾರಣ ಪರಿಸರ ನಾಶ, ಭೂಮಿಯ ಮೇಲೆ ಹಸುರೀಕರಣ ಕೊರತೆಯಿಂದ ವಾಡಿಕೆ ಮಳೆಯು ಆಗುತ್ತಿಲ್ಲ. ಇದರಿಂದಾಗಿ ಬರಗಾಲ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು ಎಂದು ತಾಪಂ ಇಒ ಜೋಸಫ್ ಹೇಳಿದರು.

ತಾಲೂಕಿನ ಮಾರ್ಜೇನಹಳ್ಳಿ, ಯಲವಾರ ಗ್ರಾಮದಲ್ಲಿ ಬುಧವಾರ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಾವು ಮಾಡುವ ಪರಿಸರ ಹಾನಿಗಳಿಗೆ ನಾವೇ ಹೆಚ್ಚು ಜವಾಬ್ದಾರರಾಗಬೇಕಾಗಿರುವ ಎಚ್ಚರಿಕೆಯನ್ನು ನೀಡುವ ದಿನವಾಗಿದೆ. ಈ ದಿನ ಪರಿಸರದ ಬಗ್ಗೆ ಜನರಲ್ಲಿ ಮತ್ತು ಸರ್ಕಾರಗಳಲ್ಲಿ ಜವಾಬ್ದಾರಿಯುತ ಭಾವವನ್ನು ಮೂಡಿಸಲು ಪ್ರಯತ್ನಿಸುತ್ತದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ವಿದ್ಯಾಶ್ರಿ ಮಂಜುನಾಥ್​ ಮಾತನಾಡಿ, ಹವಾಮಾನ ವೈಪರೀತ್ಯದಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜನಕ್ಕೆ ಅರಿವಿದ್ದು ಪರಿಸರ ಸಂರಕ್ಷಣೆಗೆ ಮುಂದಾಗುತ್ತಿಲ್ಲ. ಜನ ಎಚ್ಚೆತ್ತುಕೊಳ್ಳದೆ ಇರುವುದು ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಕಳವಳವ್ಯಕ್ತಪಡಿಸಿದರು.

ಯಂಗ್​ ಇಂಡಿಯಾ ಹೂಹಳ್ಳಿ ನಾಗರಾಜ್​ ಮಾತನಾಡಿ, ಜಿಲ್ಲೆಯಲ್ಲಿ ಗ್ರೀನ್​ ವಾರಿಯರ್ಸ್​ 150 ಮಂದಿ ಸದಸ್ಯರ ತಂಡವು ಸಸಿ ನೆಟ್ಟು, ಪ್ಲಾಸ್ಟಿಕ್​ ನಿಲ್ಲಿಸಿ ಮತ್ತು ಮಣ್ಣು ಉಳಿಸಿ ಎಂಬ ಘೋಷ್ಯ ವಾಖ್ಯದಡಿ ಮಾಡುತ್ತಾ ಅರಣ್ಯೀಕರಣಕ್ಕೆ ಒತ್ತು ನೀಡಲಾಗಿದೆ. ಜಿಲ್ಲಾದ್ಯಂತ 50,000 ಗಿಡ ನೆಟ್ಟು ಪೋಷಿಸುವುದು, ಪ್ಲಾಸ್ಟಿಕ್​ ನಿಲ್ಲಿಸಲು ಅರಿವು ಮೂಡಿಸುವ ಕಾರ್ಯ ಕೈ ಹಾಕಿದ್ದೇವೆ ಎಂದರು.
ಯಲವಾರ ಗ್ರಾ.ಪಂ ಸದಸ್ಯರಾದ ಭವ್ಯ, ಶೈಲಜಾ, ವೆಂಕಟೇಶ್​, ಕಾರ್ಯದರ್ಶಿ ಅಶ್ವತ್ಥನಾರಾಯಣಗೌಡ, ಬಿಲ್​ ಕಲೆಕ್ಟರ್​ ಮಂಜುನಾಥ್​, ಮೋನಿಕಾ ಇದ್ದರು.

ಪಿಡಿಒ ಮಧುಮತಿ, ನರೇಗಾ ಅಧಿಕಾರಿ ಆಶೋಕ, ಉಪಾಧ್ಯಕ್ಷ ಎಂ.ಶಂಕರ್​, ಗ್ರೀನ್​ ವಾರಿಯರ್ಸ್​ ತಂಡದ ಅನಂದ, ದೀಪಾ, ತೇಜಸ್ವಿನಿ, ಚಂದನ, ಕೀರ್ತಿ, ಸೋಮ, ದೇವರಾಜ್​ ಇದ್ದರು.