ಕೋಲಾರದ ಸ್ಕೌಟ್ಸ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧಾ ವಿಜೇತರಿಗೆ ಗಣ್ಯರು ಬಹುಮಾನ, ಪ್ರಮಾಣ ಪತ್ರ ವಿತರಿಸಿದರು. ಸಿಎಂಆರ್ ಶ್ರೀನಾಥ್, ಕೆ.ವಿ.ಶಂಕರಪ್ಪ, ವಿ.ಬಾನು, ಕೆ.ಆರ್.ಸುರೇಶ್, ಉಮಾದೇವಿ, ಸತೀಶ್ ಕುಮಾರ್, ಪಂಕಜಾ ಇದ್ದರು. 
ನ್ಯೂಸ್

ಪರಿಸರ ರಕ್ಷಣೆ ಸಮುದಾಯದ ಜವಾಬ್ದಾರಿ

ಕಿರುವಾರ ಎಸ್.ಸುದರ್ಶನ್

ಕೋಲಾರ: ಪರಿಸರ ನಾಶದಿಂದ ಮನುಷ್ಯ ಏನೆಲ್ಲ ತೊಂದರೆ ಅನುಭವಿಸುತ್ತಿದ್ದಾನೆ ಎಂಬುದರ ಬಗ್ಗೆ ಜಾಗೃತಿ ಮೂಡಿಸಬೇಕಿದ್ದು,

ಆ ಮೂಲಕ ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ ಎಂದು ಸಮುದಾಯಕ್ಕೆ ತಿಳಿವಳಿಕೆ ಹೇಳಿಬೇಕಿದೆ ಎಂದು ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಹೇಳಿದರು.

ನಂ-1 ದಿನ ಪತ್ರಿಕೆ ವಿಜಯವಾಣಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್, ವಂಶೋದಯ ಆಸ್ಪತ್ರೆ, ಜಿಲ್ಲಾ ಪರಿಸರ ಮತ್ತು ನೈರ್ಮಲ್ಯ ಇಲಾಖೆ, ಕೋಲಾರ ರೋಟರಿ ನಂದಿನಿ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ನಗರ ಸ್ಕೌಟ್ಸ್ ಭವನದಲ್ಲಿ, ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಶನಿವಾರ ಬಹುಮಾನ ವಿತರಿಸಿ ಮಾತನಾಡಿದರು.

ಈ ಹಿಂದೆ ನಗರ, ಗ್ರಾಮೀಣ ಪ್ರದೇಶದಲ್ಲಿನ ರಸ್ತೆಗಳ ಅಕ್ಕಪಕ್ಕದಲ್ಲಿ ಮರಗಳು ಬೃಹದ್ಧಾಕಾರವಾಗಿ ಬೆಳೆದು ನಿಂತಿದ್ದವು. ಆದರೆ ರಸ್ತೆ ಅಭಿವೃದ್ಧಿಗೆ ಅವುಗಳನ್ನು ನಾಶ ಪಡಿಸಿದ ನಂತರ ಖÁಲಿ ಜಾಗದಲ್ಲಿ ಮತ್ತೆ ಸಸಿ ನೆಡುವ ಕೆಲಸ ಅರಣ್ಯ, ಪಿಡಬ್ಲ್ಯೂಡಿಯವರು ಮಾಡಲಿಲ್ಲ. ಯಾವುದೇ ಕೆಲಸದಲ್ಲಿ ದುಡ್ಡು ಮಾಡುವ ಮಾರ್ಗಗಳನ್ನು ನೋಡುತ್ತಾರೆ ಹೊರತು ಮರಗಳನ್ನು ಬೆಳೆಸಲು ಮನಸ್ಸು ಮಾಡದಿರುವುದು ವಿಷಾದಕರ.

ಅರಣ್ಯದ ಮೇಲೆ ಪ್ರಾಣಿ, ಪಕ್ಷಿಗಳು, ಮನುಷ್ಯ ಅವಲಂಭಿಸುತ್ತಾನೆ. ಮನುಷ್ಯನ ದುರಾಸೆಯಿಂದ ಅರಣ್ಯದಲ್ಲಿ ಮರಗಳ ಸಂಖÉ್ಯ ಕಡಿಮೆಯಾಗುತ್ತಿದ್ದು, ಸಮಸ್ಯೆಗಳನ್ನು ಎದುರಿಸುವ ಸನ್ನಿವೇಶ ಇದೆ. ಹಸಿರೀಕರಣ ಕೊರತೆಯಿಂದ ನಾವು ಏನೆಲ್ಲ ಸಮಸ್ಯೆ ಎದುರಿಸುತ್ತಿದ್ದೇವೆ ಎಂಬುದನ್ನು ಮನುಷ್ಯ ಈಗ ಅರಿತಿದ್ದಾನೆ. ಹಸಿರೀಕಣ ವೃದ್ಧಿಯಾದಾಗಲೇ ಮನುಕುಲದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ಕುಮಾರ್, ರೋಟರಿ ಕೋಲಾರ ನಂದಿನಿ ಅಧ್ಯಕ್ಷ ವಿ.ಬಾಬು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಕೆ.ಅರ್.ಸುರೇಶ್, ಕಾರ್ಯದರ್ಶಿ ಉಮಾದೇವಿ, ರಾಜು ಡೆಂಟಲ್ ವೈದ್ಯೆ ಡಾ.ಪಂಕಜಾ ಜನಾರ್ದನ್, ಶಿಕ್ಷಕಿ ಸುಷ್ಮಾ ಇದ್ದರು.

ಪರಿಸರ ಸಮತೋಲನ ಅಗತ್ಯ

ವಾತಾವರಣದಲ್ಲಿ ಉಂಟಾಗುವ ವೈಪರಿತ್ಯದಿಂದ ಕೆಲವೊಮ್ಮೆ ಪ್ರಗತಿಯು ಮುನಿಸಿಕೊಳ್ಳುತ್ತದೆ. ಆಗ ಮಳೆ ಕೊರತೆಯಾಗುತ್ತದೆ. ಇನ್ನು ಕೆಲವೊಮ್ಮೆ ಅತಿಯಾದ ಮಳೆಯಾಗಿ ಪ್ರವಾಹಗಳು ಉಂಟಾಗುತ್ತವೆ. ಇದಕ್ಕೆಲ್ಲ ನಾವೇ ಕಾರಣರಾಗಿದ್ದೇವೆ. ನಮ್ಮ ಕಡೆ ಮಳೆ ಕೊರತೆಯಿಂದ ಬರಪರಿಸ್ಥಿತಿ ಎದುರಾಗುತ್ತದೆ. ಮಲೆನಾಡು ಭಾಗದಲ್ಲಿ ಅತಿಯಾದ ಮಳೆಯಾಗಿ ಗುಡ್ಡ ಕುಸಿಯುತ್ತವೆ. ಇಂತಹ ಸಮಸ್ಯೆಗಳಿಂದ ಮುಕ್ತರಾಗಬೇಕಾದರೆ ಪರಿಸರ ಸಮತೋಲನ ಮಾಡಬೇಕು ಎಂದು ಸಿಎಂಆರ್ ಶ್ರೀನಿವಾಸ್ ಎಚ್ಚರಿಸಿದರು.

ಪರಿಸರ ರಕ್ಷಣೆಯಲ್ಲಿ ಮುಂದು

ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡುತ್ತದೆ. ಅದರಲ್ಲೂ ಪರಿಸರ ರಕ್ಷಣೆಯಲ್ಲಿ ಮುಂಚೂಣಿಯಲ್ಲಿದ್ದು, ಇದರ ಜತೆಗೆ ವಿವಿಧ ಸಂಸ್ಥೆಗಳು ಕೈ ಜೋಡಿಸಿರುವುದು ಶ್ಲಾಘನೀಯ ಎಂದು ಸಂಸತ ವ್ಯಕ್ತಪಡಿಸಿದರು.

ಜಾಗತೀಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳಿಂದ ನಿಸರ್ಗದಲ್ಲೂ ಬದಲಾವಣೆಗಳಾಗುತ್ತವೆ. ಅವು ನಮ್ಮ ಮೇಲೆಯೇ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದನ್ನು ಮನಗಂಡು ಹುಟ್ಟುಹಬ್ಬ, ಶುಭ ದಿನಗಳಂದು ದುಂದು ವೆಚ್ಚ ಮಾಡಿ ಸಂಭ್ರಮಿಸುವ ಬದಲು ಸಸಿ ನೆಟ್ಟು ಪೋಷಣೆ ಮಾಡಿ. ಅದು ನಿಮ್ಮೊಟ್ಟಿಗೆ ಬೆಳೆಯುತ್ತಿದ್ದರೆ ಮನುಷ್ಯನಲ್ಲೂ ಬದಲಾವಣೆ ಕಾಣಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ವಿಜೇತರಿಗೆ ಬಹುಮಾನ, ಪ್ರಮಾಣ ಪತ್ರ ವಿತರಣೆ

ಚಿತ್ರಕಲೆ ಸ್ಪರ್ಧೆಯಲ್ಲಿ ಮಾಧ್ಯಮಿಕ ವಿಭಾಗದಲ್ಲಿ ಚಿನ್ಮಯ ಶಾಲೆ ಎ.ಜಮುನ ಪ್ರಥಮ, ಎಸ್.ಲಕ್ಷಿ÷್ಮÃ ದ್ವಿತೀಯ ಹಾಗೂ ವೈಷ್ಣವಿ ತೃತೀಯ ಸ್ಥಾನ ಪಡೆದಿದ್ದು, ಪ್ರೌಢ ಶಾಲಾ ವಿಭಾಗಲ್ಲಿ ಮಹಿಳಾ ಸಮಾಜ ಶಾಲೆಯ ಪಿ.ಆಕಾಶ್ ಪ್ರಥಮ, ಸುವರ್ಣ ಸೆಂಟ್ರಶಾಲೆ ಶ್ರೀಲೇಖÁ ದ್ವಿತೀಯ, ಎಸ್‌ಡಿಸಿ ಶಾಲೆಯ ಎಸ್.ಪ್ರಶಾಂತಿ ತೃತೀಯ. ಪ್ರಾಥಮಿಕ ವಿಭಾಗದಲ್ಲಿ ಚಿನ್ಮಯ ಶಾಲೆ ಎಂ.ಎಸ್.ಶ್ರೀರಕ್ಷಾ ಪ್ರಥಮ, ಬಿಜಿಎಸ್ ವಲ್ಡ್ ಶಾಲೆಯ ನಿಕಲ್ಪ ದ್ವಿತೀಯ, ವೆಂಕಟೇಶ್ವರ ಶಾಲೆ ವೈ.ಶಯಸ್ವಿನಿ ತೃತೀಯ ಸ್ಥಾನ ಪಡೆದುಕೊಂಡಿದ್ದರು. ಪ್ರಬಂಧ ಸ್ಪರ್ಧೆ ವಿಜೇತರಾದ ಚಿನ್ಮಯ ವಿದ್ಯಾಲಯದ ಇಂಪನಾ ಜೆ.ರಾಜ್ ಪ್ರಥಮ, ಎಸ್.ಲಕ್ಷಿ÷್ಮÃ ದ್ವಿತೀಯ ಹಾಗೂ ಎಸ್.ಅವನಿಕಾ ತೃತೀಯ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.