ಮಂಡ್ಯ: ಮಾಜಿ ಎಂಎಲ್ಸಿ ದಯಾನಂದ ರೆಡ್ಡಿ ಸಹೋದರ ಹಾಗೂ ಉದ್ಯಮಿ ಬಿ.ಟಿ. ನಾಗರಾಜ್ ರೆಡ್ಡಿ ಅವರು ಚೆಕ್ಪೋಸ್ಟ್ನಲ್ಲಿ ಚುನಾವಣಾ ಸೇವಾ ನಿರತ ಪೊಲೀಸರ ಮೇಲೆಯೇ ಹಲ್ಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ
ಈ ಘಟನೆ ಕೆಆರ್ಎಸ್ ಸಮೀಪದ ಎಂಎನ್ಪಿಎಂ ಸರ್ಕಲ್ ಚೆಕ್ಪೋಸ್ಟ್ನಲ್ಲಿ ನಡೆದಿದೆ. ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರದಲ್ಲಿರುವ ಮಹೇಂದ್ರ ಗ್ರೂಪ್ನ ಮಾಲೀಕ ಬಿ.ಟಿ. ನಾಗರಾಜ್ ರೆಡ್ಡಿ ಅವರು ಕಾರನ್ನು ತಡೆದು ತಪಾಸಣೆ ಮಾಡಲು ಪೊಲೀಸರು ಮುಂದಾಗಿದ್ದರು. ಈ ವೇಳೆ ನನ್ನ ಕಾರನ್ನೇ ತಡೆಯುತ್ತೀರಾ ಎಂದು ಪೋಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಇದನ್ನೂ ಓದಿ: ಮನೆಯ ಮಹಡಿಯಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಬಾಲಕರಿಬ್ಬರ ಸಾವು: ತುಮಕೂರಲ್ಲಿ ದುರ್ಘಟನೆ
ಮೇಲಾಧಿಕಾರಿಗೆ ಪೋನ್ ಮಾಡು
ಹಲವು ಬಾರಿ ಕಾರಿನ ಚಾಲಕ ಅಡ್ಡಗಟ್ಟಿದರು ಸಹ ಬಿಡದೆ ಪೋಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ನಿಮ್ಮ ಮೇಲಾಧಿಕಾರಿಗೆ ಪೋನ್ ಮಾಡು ಎಂದು ದರ್ಪ ಮೆರೆದಿದ್ದಾರೆ. ಕರ್ತವ್ಯ ನಿರತ ಪೋಲೀಸರ ಮೇಲೆಯೇ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ದಿಗ್ವಿಜಯ ನ್ಯೂಸ್)