ಪೀಠಾರೋಹಣ ಮಾಡಿದ ವರ್ಧಂತಿ ಅಂಗವಾಗಿ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ ಸಿಂಹನಗದ್ದೆ ಬಸ್ತಿಮಠದಲ್ಲಿ ವಿಶೇಷ ಪೂಜೆ ನೆರವೇರಿಸಿದರು.  
ನ್ಯೂಸ್

ಬಸ್ತಿಮಠದಲ್ಲಿ ಶ್ರೀಗಳ ಪೀಠಾರೋಹಣ ಉತ್ಸವ

ಎನ್.ಆರ್.ಪುರ: ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದಲ್ಲಿ ಪೀಠಾಧಿಪತಿ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ ಪೀಠಾರೋಹಣ ಮಾಡಿದ 10ನೇ ವರ್ಷದ ವರ್ಧಂತಿ ಉತ್ಸವವನ್ನು ಶ್ರೀಕ್ಷೇತ್ರ ಬಸದಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗ ಸರಳವಾಗಿ ಆಚರಿಸಲಾಯಿತು.

ಉತ್ಸವದ ಅಂಗವಾಗಿ ಜ್ವಾಲಾಮಾಲಿನಿ ದೇವಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಶ್ರೀಗಳು ಪಾರಂಪರಿಕ ಪೀಠಕ್ಕೆ ವಜ್ರ ಪಂಜರ ಆರಾಧನೆ ನೆರವೇರಿಸಿದರು. ಪಾದ ಪೂಜೆ ಹಾಗೂ ಶ್ರಾವಕರಿಗೆ ಮಂತ್ರಾಕ್ಷತೆ ನೀಡಲಾಯಿತು.