ಮುಂಬೈ: ನಟಿ ದೀಪಿಕಾ ಪಡುಕೋಣೆ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಫೈಟರ್' ಇದೀಗ ಬಿಡುಗಡೆಯಾಗಿದೆ. ಪ್ರೇಕ್ಷಕರು ಕೂಡ ಚಿತ್ರವನ್ನು ಬಹಳ ಇಷ್ಟಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಬಹುತೇಕರಿಗೆ ದೀಪಿಕಾ ಅವರ ನಿವ್ವಳ ಮೌಲ್ಯ ಮತ್ತು ಐಷಾರಾಮಿ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಕೂಡ ಹೆಚ್ಚಿದೆ. ಹಾಗಾಗಿ ಇಂದು ದೀಪಿಕಾ ಅವರು ಒಂದು ಸಿನಿಮಾಗೆ ತೆಗೆದುಕೊಳ್ಳುವ ಸಂಭಾವನೆ, ಅವರ ಬಳಿ ಇರುವ ಐಷಾರಾಮಿ ಪ್ರಾಪರ್ಟಿ ಬೆಲೆಯೇನು ಎಂದು ತಿಳಿದುಕೊಳ್ಳೋಣ.
ಶಾರುಖ್ ಖಾನ್ ಜೊತೆ 'ಓಂ ಶಾಂತಿ ಓಂ' ಸಿನಿಮಾದ ಮೂಲಕ ಕೆರಿಯರ್ ಆರಂಭಿಸಿದ ದೀಪಿಕಾ ಪಡುಕೋಣೆ ಇಂದು ಬಾಲಿವುಡ್ ಸ್ಟಾರ್ ನಟಿ. ತನ್ನ ನಟನೆಯ ಜೊತೆಗೆ ಸೌಂದರ್ಯಕ್ಕೂ ಹೆಸರುವಾಸಿಯಾಗಿದ್ದಾರೆ. ಕಳೆದ 16 ವರ್ಷಗಳಲ್ಲಿ ದೀಪಿಕಾ ಹಿಂದಿ ಚಿತ್ರರಂಗಕ್ಕೆ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಹಾಗಾಗಿ ಇಂದು ನಟಿ ಕೋಟಿಗಟ್ಟಲೆ ಆಸ್ತಿಯ ಒಡೆಯರಾಗಿದ್ದಾರೆ.
ಆದರೆ ದೀಪಿಕಾ ಕೇವಲ ಚಲನಚಿತ್ರಗಳಿಂದ ಮಾತ್ರವಲ್ಲದೆ, ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳು ಮತ್ತು ಚಲನಚಿತ್ರ ನಿರ್ಮಾಣದಿಂದಲೂ ಸಾಕಷ್ಟು ಗಳಿಸುತ್ತಾರೆ. ಇದಲ್ಲದೆ, ನಟಿ ಅನೇಕ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.
ದೀಪಿಕಾ ಅವರ ನಿರ್ಮಾಣ ಸಂಸ್ಥೆಯ ಹೆಸರು 'ಕಾ ಪ್ರೊಡಕ್ಷನ್ಸ್'. ಇದರಲ್ಲಿ ಅವರು '83' ಮತ್ತು 'ಛಪಾಕ್' ಚಿತ್ರಗಳನ್ನು ಮಾಡಿದ್ದಾರೆ. ಮನಿ ಕಂಟ್ರೋಲ್ ವರದಿ ಪ್ರಕಾರ, ದೀಪಿಕಾ ಪಡುಕೋಣೆ ನಿವ್ವಳ ಮೌಲ್ಯ 500 ಕೋಟಿ ರೂ.
ಸಂಭಾವನೆ ಬಗ್ಗೆ ಮಾತನಾಡುವುದಾದರೆ ಬಾಲಿವುಡ್‌ನ ಟಾಪ್ ನಟಿಯರ ಪಟ್ಟಿಯಲ್ಲಿ ಸೇರಿರುವ ದೀಪಿಕಾ ಇಂದು ಚಿತ್ರವೊಂದಕ್ಕೆ ಸುಮಾರು 30 ಕೋಟಿ ರೂಪಾಯಿ ಶುಲ್ಕವನ್ನು ವಿಧಿಸುತ್ತಾರೆ. ಅಲ್ಲಿಗೆ ನಟಿಯ ವಾರ್ಷಿಕ ಗಳಿಕೆ ಸುಮಾರು 40 ಕೋಟಿ ರೂ.
ದೀಪಿಕಾ ಕೂಡ ಐಷಾರಾಮಿ ಕಾರುಗಳನ್ನು ಇಷ್ಟಪಡುತ್ತಾರೆ. ಅದಕ್ಕಾಗಿಯೇ ಅವರ ಗ್ಯಾರೇಜ್ ನಲ್ಲಿ ಕ್ಯೂ7 ಮತ್ತು ಬಿಎಂಡಬ್ಲ್ಯು 5 ನಂತಹ ಐಷಾರಾಮಿ ಕಾರುಗಳಿವೆ. ದೀಪಿಕಾ ಕೊನೆಯದಾಗಿ 'ಜವಾನ್' ಚಿತ್ರದಲ್ಲಿ ಕಾಣಿಸಿಕೊಂಡರು. ಈಗ ಫೈಟರ್ ಮೂಲಕ ಹಿರಿತೆರೆಯಲ್ಲಿ ಸದ್ದು ಮಾಡುತ್ತಿದ್ದಾರೆ.