ಮುಂಬೈ: ಇಂದು ಈ ಲೇಖನದಲ್ಲಿ ಬಾಲಿವುಡ್ ಗೆ ಪಾದಾರ್ಪಣೆ ಮಾಡುವ ಮೊದಲು ಜೀವನದಲ್ಲಿ ಸಾಕಷ್ಟು ಕಷ್ಟ-ನಷ್ಟ ಅನುಭವಿಸಿದ ಬಾಲಿವುಡ್ ನಟನ ಬಗ್ಗೆ ಹೇಳಲಿದ್ದೇವೆ. ಹೌದು, ಆ ಬಾಲಿವುಡ್ ನಟನ ಹೆಸರು ರಣದೀಪ್ ಹೂಡಾ. ರಣದೀಪ್ ಕೆಲವೇ ಚಿತ್ರಗಳ ಮೂಲಕ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿರುವ ನಟ. ಅದು 'ಸಾಹಿಬ್ ಬೀವಿ ಔರ್ ಗ್ಯಾಂಗ್‌ಸ್ಟರ್', 'ಸರಬ್ಜೀತ್ ' ಮತ್ತು 'ಹೈವೇ' ಆಗಿರಬಹುದು ರಣದೀಪ್ ಪ್ರತಿ ಪಾತ್ರದ ಮೂಲಕ ತಮ್ಮ ಚಿತ್ರಗಳಿಗೆ ಜೀವ ತುಂಬಿದರು. ಆದರೆ, ಇಲ್ಲಿಯವರೆಗೆ ಪ್ರಯಾಣ ಮಾಡುವುದು ರಣದೀಪ್ ಗೆ ಸುಲಭವಾಗಿರಲಿಲ್ಲ. ನಟನಾಗುವ ಮುನ್ನ ರಣದೀಪ್ ಜೀವನದಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದರು.
ರಣದೀಪ್ ಹರಿಯಾಣದ ನಿವಾಸಿ. ಬೋರ್ಡಿಂಗ್ ಸ್ಕೂಲ್ ನಲ್ಲಿ ತಮ್ಮ ಶಿಕ್ಷಣವನ್ನು ಪಡೆದರು. ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಮಾರ್ಕೆಟಿಂಗ್‌ನಲ್ಲಿ ಪದವಿ ಪಡೆಯಲು ಆಸ್ಟ್ರೇಲಿಯಾದತ್ತ ಹೋದರು. ಆದರೆ ಈ ಅಜ್ಞಾತ ದೇಶದಲ್ಲಿ ಬದುಕುವುದು ರಣದೀಪ್ ಗೆ ಸುಲಭವಾಗಿರಲಿಲ್ಲ.
ಅಲ್ಲಿ ತನ್ನ ಜೀವನೋಪಾಯಕ್ಕಾಗಿ, ಮಾಣಿಯಾಗಿ ಕೆಲಸ ಮಾಡುತ್ತಾ, ಟ್ಯಾಕ್ಸಿ ಓಡಿಸುತ್ತಾರೆ. ಅಷ್ಟೇ ಅಲ್ಲ ರಣದೀಪ್ ಜನರ ಕಾರುಗಳನ್ನು ತೊಳೆದಿದ್ದಾರೆ. ಆದರೆ, ಇದೆಲ್ಲವೂ ತನ್ನ ಅಧ್ಯಯನದ ಮೇಲೆ ಪರಿಣಾಮ ಬೀರಲು ಬಿಡಲಿಲ್ಲ.
ಪದವಿ ಮುಗಿಸಿದ ನಂತರ ಭಾರತಕ್ಕೆ ಮರಳಿದರು. ಇಲ್ಲಿಗೆ ಬಂದ ನಂತರ, ನಟ ವಿಮಾನಯಾನ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ಕೆಲಸ ಮಾಡಲು ಪ್ರಾರಂಭಿಸಿದರು.
ಕೊನೆಗೆ ಈ ನೌಕ್ರಿ ಬಿಟ್ಟು ರಣದೀಪ್ ಹೂಡಾ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟರು. ಇದಾದ ನಂತರ ಅವರ ಅದೃಷ್ಟ ಕುಲಾಯಿಸಿತು. ಮಾಡೆಲಿಂಗ್ ನಂತರ, ಅವರು ರಂಗಭೂಮಿ ಕಡೆಗೆ ಹೆಜ್ಜೆ ಹಾಕಿದರು. ಇಂದು ಅವರ ಹೆಸರು ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ ಅವರು ಹಿಂದಿ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿದ್ದಾರೆ.