ಸೊರಬದಲ್ಲಿ ಶ್ರೀ ಮಹಾಂತ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಮಲ್ಲವ ಸಮಾಜದ ಮುಖಂಡರ ಸಭೆಯಲ್ಲಿ ರಾಜಶೇಖರ ಗೌಡ, ಕೆ.ವಿ.ಗೌಡ, ಅರವಿಂದ ಪಾಟೀಲ್ ಇತರರಿದ್ದರು.  
ನ್ಯೂಸ್

ಉಪಜಾತಿ ಮಲ್ಲವ ಎಂದು ನಮೂದಿಸಿ

ಶಿವಕುಮಾರ ಎಸ್.ಪಿ.

ಸೊರಬ: ಗಣತಿಯ ಸಮಯದಲ್ಲಿ ವೀರಶೈವ ಲಿಂಗಾಯತ ಜಾತಿ ಎಂದು ಬರೆಸುವುದರ ಜತೆಗೆ ಉಪಜಾತಿಯ ಕಾಲಂನಲ್ಲಿ ಮಲ್ಲವ ಎಂದು ಬರೆಯಿಸುವಂತೆ ಅಖಿಲ ಭಾರತ ಮಲ್ಲವ ಸಮಾಜದ ಅಧ್ಯಕ್ಷ ಕೆ.ಜಿ.ಜಗದೀಶ ಒಡೆಯರ್ ತಿಳಿಸಿದರು.

ಪಟ್ಟಣದ ಮುರುಘಾ ಮಠದಲ್ಲಿ ಶ್ರೀ ಮಹಾಂತ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಮಲ್ಲವ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ನಡೆಸಲು ಉದ್ದೇಶಿಸಿರುವ ಜಾತಿಗಣತಿ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯಿತ ಮಲ್ಲವ ಸಮಾಜದವರು ಈ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕು. ಗಣತಿಯಿಂದ ಬಂದ ಮಾಹಿತಿಯಿಂದ ನಾನಾ ಕ್ಷೇತ್ರದಲ್ಲಿ ಉದ್ಯೋಗ, ಶೈಕ್ಷಣಿಕ ಮೀಸಲಾತಿ ಪಡೆಯಲು ಅನುಕೂಲವಾಗಲಿದೆ. ಗಣತಿದಾರರು ಬಂದ ಸಮಯದಲ್ಲಿ ಸರಿಯಾದ ಮಾಹಿತಿ ನೀಡಬೇಕು ಎಂದರು.

ಸರ್ಕಾರಕ್ಕೆ ನಾಡಿನ ಜನರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ನಿಖರ ಮಾಹಿತಿ ದೊರೆತರೆ ಕಲ್ಯಾಣ ಕಾರ್ಯಕ್ರಮ ರೂಪಿಸಲು ಅನುವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಈ ಸಮೀಕ್ಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಅಖಿಲ ಭಾರತ ಮಲ್ಲವ ಸಮಾಜದ ತಾಲೂಕು ಅಧ್ಯಕ್ಷ ರಾಜಶೇಖರ ಗೌಡ, ಕೆ.ವಿ.ಗೌಡ, ಅರವಿಂದ ಪಾಟೀಲ್, ಎಂ.ಆರ್.ಪಾಟೀಲ್, ಎಸ್.ಎಂ.ಪಾಟೀಲ್, ವಿಜೇಂದ್ರ ಗೌಡ, ಎಚ್.ಕೆ.ಜಯಶೀಲ ಗೌಡ, ಸುರೇಂದ್ರ ಗೌಡ, ಗುರುಕುಮಾರ ಪಾಟೀಲ್, ರವಿಶಂಕರ ಗೌಡ, ದಯಾನಂದ ಗೌಡ, ಪ್ರದೀಪ ಗೌಡ, ಮೃತ್ಯುಂಜಯ ಗೌಡ, ಪಂಚಾಕ್ಷರಿ ಗೌಡ ಇದ್ದರು.