ಶಿವಮೊಗ್ಗ ದೊಡ್ಡಪೇಟೆ ಠಾಣೆ 
ನ್ಯೂಸ್

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಇಂಜಿನಿಯರ್ ಲ್ಯಾಪ್‌ಟಾಪ್ ಕಳವು

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಇಂಜಿನಿಯರ್ ಒಬ್ಬರ ಲ್ಯಾಪ್‌ಟಾಪ್, ಐಫೋನ್ ಇದ್ದ ಬ್ಯಾಗ್ ಕಳ್ಳತನವಾಗಿದೆ.

ತೀರ್ಥಹಳ್ಳಿ ತಾಲೂಕು ಕಮ್ಮರಡಿಯ ಇಂಜಿನಿಯರ್ ಸುಹೈಬತ್ ಉಲ್ ಅಸ್ಲಾಮಿಯಾ ಎಂಬುವರು ಬೆಂಗಳೂರಿನಿಂದ ತಮ್ಮೂರಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಸುಹೈಬತ್ ಉಲ್ ಅಸ್ಲಾಮಿಯಾ ಅವರು ಬೆಂಗಳೂರಿನಿಂದ ಶೃಂಗೇರಿಗೆ ತೆರಳುವ ಬಸ್ ಹತ್ತಿದ್ದರು. ಆ ಬಸ್ ಬೆಳಗ್ಗೆ 5 ಗಂಟೆಗೆ ಶಿವಮೊಗ್ಗಕ್ಕೆ ಬಂದು ಶೃಂಗೇರಿ ಕಡೆಗೆ ತೆರಳುತ್ತಿತ್ತು.
ತೀರ್ಥಹಳ್ಳಿ ತಾಲೂಕು ಹೆಗ್ಗೋಡು ಬಳಿ ಬಸ್ ತೆರಳುತ್ತಿದ್ದ ವೇಳೆ ಸುಹೈಬತ್ ಅವರಿಗೆ ಮನೆಯವರು ಕರೆ ಮಾಡಿದ್ದರು. ಎಚ್ಚರವಾದಾಗ ಪಕ್ಕದಲ್ಲಿ ಇಟ್ಟಿದ್ದ ಬ್ಯಾಗ್ ನಾಪತ್ತೆಯಾಗಿತ್ತು. ಬ್ಯಾಗ್‌ನಲ್ಲಿ ಬಟ್ಟೆ, ಚಪ್ಪಲಿ, ಐ ಫೋನ್ ಚಾರ್ಜರ್, ಲ್ಯಾಪ್‌ಟಾಪ್ ಇತ್ತು. ಬಸ್ ಶಿವಮೊಗ್ಗ ನಿಲ್ದಾಣಕ್ಕೆ ಹೋಗಿದ್ದಾಗ ಕಳ್ಳರು ತಮ್ಮ ಬ್ಯಾಗ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.