‘ರಣಬಲಿ’ ಸಿನಿಮಾದ ಮೊದಲ ಹಾಡು ‘ಎಂಧಯ್ಯ ಸಾಮಿ’ಬಿಡುಗಡೆ 
ನ್ಯೂಸ್

ವಿಜಯ್-ರಶ್ಮಿಕಾ ಜೋಡಿಯ ‘ಎಂಧಯ್ಯ ಸಾಮಿ’ ಸಾಂಗ್ ಔಟ್; 19ನೇ ಶತಮಾನದ ಲುಕ್‌ನಲ್ಲಿ ಕಮಾಲ್! | Endhayya Saami Song

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ರಣಬಲಿ’ ಸಿನಿಮಾದ ಮೊದಲ ಹಾಡು ‘ಎಂಧಯ್ಯ ಸಾಮಿ’ ಬಿಡುಗಡೆಯಾಗಿದೆ. 19ನೇ ಶತಮಾನದ ಹಿನ್ನೆಲೆಯಲ್ಲಿರುವ ಈ ಹಾಡು ವಿಜಯ್-ರಶ್ಮಿಕಾ ಜೋಡಿಯ ಪ್ರೀತಿಯ ಕಥೆಗೆ ಝಲಕ್ ನೀಡಿದೆ.

‘ರಣಬಲಿ’ ಚಿತ್ರದ ಮೊದಲ ಹಾಡು ‘ಎಂಧಯ್ಯ ಸಾಮಿ’ ರಿಲೀಸ್

ವಿಜಯ್ ದೇವರಕೊಂಡ-ರಶ್ಮಿಕಾ ಜೋಡಿಯ ರೊಮ್ಯಾಂಟಿಕ್ ಲುಕ್‌

19ನೇ ಶತಮಾನದ ರಾಯಲಸೀಮೆ ಹಿನ್ನೆಲೆಯಲ್ಲಿರುವ ಸಿನಿಮಾ

Ranabaali First Song: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ‘ರಣಬಲಿ’ ಸಿನಿಮಾದ ಮೊದಲ ಹಾಡು ‘ಎಂಧಯ್ಯ ಸಾಮಿ’ ಬಿಡುಗಡೆಯಾಗಿದೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ.

19ನೇ ಶತಮಾನದ ಹಿನ್ನೆಲೆಯ ಈ ಹಾಡಿನಲ್ಲಿ ವಿಜಯ್ ಮತ್ತು ರಶ್ಮಿಕಾ ದಂಪತಿಯಾಗಿ ಕಾಣಿಸಿಕೊಂಡಿದ್ದಾರೆ. ರಣಬಲಿ ಮತ್ತು ಜಯಮ್ಮ ನಡುವಿನ ಪ್ರೀತಿ, ನಂಬಿಕೆ ಹಾಗೂ ಬಾಂಧವ್ಯಕ್ಕೆ ಹಾಡು ಒತ್ತು ನೀಡಿದೆ. ಇಬ್ಬರ ರೊಮ್ಯಾಂಟಿಕ್ ಕೆಮಿಸ್ಟ್ರಿ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ.

ರಾಯಲಸೀಮೆ ಹಿನ್ನೆಲೆಯ ಕಥೆ

‘ರಣಬಲಿ’ ಸಿನಿಮಾ 19ನೇ ಶತಮಾನದ ಬ್ರಿಟಿಷರ ಆಳ್ವಿಕೆಯ ಕಾಲದ ರಾಯಲಸೀಮೆಯ ಕಥೆ. ಬರ ಮತ್ತು ಕ್ಷಾಮದ ನಡುವೆ ತನ್ನ ಜನರಿಗಾಗಿ ಹೋರಾಡುವ ಯೋಧನಾಗಿ ವಿಜಯ್ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಅವರ ಪತ್ನಿ ಜಯಮ್ಮ ಪಾತ್ರದಲ್ಲಿದ್ದು, ಆರ್ನಾಲ್ಡ್ ವೋಸ್ಲೂ ಬ್ರಿಟಿಷ್ ವಿರೋಧಿ ಪಾತ್ರದಲ್ಲಿ ನಟಿಸಿದ್ದಾರೆ.

ಅಜಯ್-ಅತುಲ್ ಸಂಗೀತ

ಸಿನಿಮಾಗೆ ಅಜಯ್-ಅತುಲ್ ಸಂಗೀತ ನೀಡಿದ್ದಾರೆ. ತೆಲುಗು ವರ್ಷನ್‌ಗೆ ಶ್ವೇತಾ ಮೋಹನ್ ಮತ್ತು ಅಜಯ್ ಗೋಗವಾಲೆ ಧ್ವನಿ ನೀಡಿದ್ದು, ರಾಮಜೋಗಯ್ಯ ಶಾಸ್ತ್ರಿ ಸಾಹಿತ್ಯ ಬರೆದಿದ್ದಾರೆ. ಹಾಡಿನ ಪ್ರೋಮೋ ಈ ಹಿಂದೆ ಗಮನ ಸೆಳೆದಿದ್ದು, ಇದೀಗ ಸಂಪೂರ್ಣ ಹಾಡು ಬಿಡುಗಡೆಯಾಗಿದೆ.

ಇದನ್ನೂ ಓದಿ: ಮನುಷ್ಯರೇ ಇಲ್ಲದಿದ್ದರೆ ಭೂಮಿ ಹೇಗಿರುತ್ತೆ? ಕೆಲವೇ ವರ್ಷಗಳಲ್ಲಿ ನಗರಗಳು ಕಾಡಾಗುವ ರೋಚಕ Timeline | Earth without humans

‘ರಣಬಲಿ’ ಸಿನಿಮಾ ಬಿಡುಗಡೆ ಯಾವಾಗ?

ರಾಹುಲ್ ಸಂಕೃತ್ಯಾಯನ್ ನಿರ್ದೇಶನದ ಈ ಸಿನಿಮಾವನ್ನು ನವೆನ್ ಯೆರ್ನೇನಿ ಮತ್ತು ವೈ. ರವಿಶಂಕರ್ ನಿರ್ಮಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್‌ನಲ್ಲಿ ಮೂಡಿಬಂದಿರುವ ಸಿನಿಮಾವನ್ನು ಟಿ-ಸೀರೀಸ್ ಫಿಲ್ಮ್ಸ್ ಪ್ರಸ್ತುತಪಡಿಸುತ್ತಿದೆ. ರಣಬಲಿ ಅಕ್ಟೋಬರ್ 16, 2026ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.(ಏಜೆನ್ಸೀಸ್​)