ಭದ್ರಾವತಿ ತಾಲೂಕು ಗುಡಮಘಟ್ಟ ಗ್ರಾಮದ ಬಳಿ ಅಕ್ರಮವಾಗಿ ನೆಡಲಾಗಿದ್ದ ಅಡಕೆ ಗಿಡಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಾಶಪಡಿಸಿರುವುದು.  
ನ್ಯೂಸ್

ಅರಣ್ಯ ಒತ್ತುವರಿ ಭೂಮಿ ವಶ

ಭದ್ರಾವತಿ: ತಾಲೂಕಿನ ಗುಡಮಘಟ್ಟ ಸರ್ವೇ ನಂ.43ರಲ್ಲಿ ಅರಣ್ಯ ಒತ್ತುವರಿ ಮಾಡಿ ತೋಟ ನಿರ್ಮಿಸಿಕೊಂಡಿದ್ದ ಸುಮಾರು 15 ಎಕರೆ ಭೂಮಿಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಅರಣ್ಯ ಒತ್ತುವರಿ ಸಂಬಂಧಿಸಿ 5 ಜನರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರು. ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯ ಒತ್ತುವರಿ ತೆರವುಗೊಳಿಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಭದ್ರಾವತಿ ಉಪ ಅರಣ್ಯ ಸಂಕ್ಷಣಾಧಿಕಾರಿ ಎಂ.ವಿ.ಆಶೀಶ್‌ರೆಡ್ಡಿ ಹಾಗೂ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು. 15 ಎಕರೆ ಒತ್ತುವರಿ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ, ತೆಂಗು, ಅಡಕೆ ಬೆಳೆಗಳನ್ನು ನಾಶಪಡಿಸಿ ಇಲಾಖೆ ವಶಕ್ಕೆ ಪಡೆಯಲಾಯಿತು.