ಹೊಳೆಹೊನ್ನೂರಿನ ವಿವೇಕಾನಂದ ಲಯನ್ಸ್ ಪಿಯು ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ‘ದೃಷ್ಟಿ’ ಕಾರ್ಯಕ್ರಮವನ್ನು ಪ್ರಾಚಾಯ ಎಸ್.ರಂಗನಾಥಯ್ಯ ಉದ್ಘಾಟಿಸಿದರು.  
ನ್ಯೂಸ್

ವಿದ್ಯಾರ್ಥಿಗಳ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹಿಸಿ

ಶಿವಕುಮಾರ ಎಸ್.ಪಿ.

ಹೊಳೆಹೊನ್ನೂರು: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಕಲಿಕೆಯ ಎಲ್ಲ ಗುಣಲಕ್ಷಣ ಹೊಂದಿರುತ್ತಾರೆ. ಅವರಿಗೆ ಅದರ ಸರಿಯಾದ ಬಳಕೆಗೆ ಪಾಲಕರು ಹಾಗೂ ಶಿಕ್ಷಕರು ಸಹಕಾರ ನೀಡಬೇಕು ಎಂದು ಪಟ್ಟಣದ ವಿವೇಕಾನಂದ ಲಯನ್ಸ್ ಪಿಯು ಕಾಲೇಜು ಪ್ರಾಚಾರ್ಯ ಎಸ್.ರಂಗನಾಥಯ್ಯ ಹೇಳಿದರು.

ಪಟ್ಟಣದ ವಿವೇಕಾನಂದ ಲಯನ್ಸ್ ಪಿಯು ಕಾಲೇಜು ಆವರಣದಲ್ಲಿ ಬುಧವಾರ ನಡೆದ 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆ ‘ದೃಷ್ಟಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಅನೇಕ ಆಕಾಂಕ್ಷೆ ಹಾಗೂ ದೃಷ್ಟಿಕೋನ ಹೊಂದಿ ಕಾಲೇಜು ಶಿಕ್ಷಣಕ್ಕೆ ಕಾಲಿಡುತ್ತಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಿದಲ್ಲಿ ಪ್ರತಿಯೊಬ್ಬರೂ ಯಶಸ್ಸು ಕಾಣುತ್ತಾರೆ ಎಂದರು.

ಪ್ರಥಮ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಯಿತು. ವಿವೇಕಾನಂದ ಲಯನ್ಸ್ ವಿದ್ಯಾವರ್ಧಕ ಟ್ರಸ್ಟ್ ಅಧ್ಯಕ್ಷ ಜಿ.ಆರ್.ಸೀತಾರಾಮ್, ಕಾರ್ಯದರ್ಶಿ ದ್ಯಾಮಪ್ಪ, ಖಜಾಂಚಿ ಡಾ. ಯು.ವಿಜಯಶೆಟ್ಟಿ, ಆಡಳಿತಾಧಿಕಾರಿ ಇ.ರೇಣುಕಾ, ಲಯನ್ಸ್ ಕ್ಲಬ್ ಕಾರ್ಯದರ್ಶಿ ರಾಜೇಶ್, ನಿರ್ದೇಶಕ ಜಿ.ವೈ.ನಾಗರಾಜ ರಾವ್ ಗಡದೆ, ಉಪನ್ಯಾಸಕ ಪದ್ಮನಾಭ್, ಪಿ.ರುದ್ರೇಶನ್, ಎನ್.ಸತೀಶ್, ಮಲ್ಲೇಶಪ್ಪ, ಪ್ರವೀಣ್‌ಕುಮಾರ್, ರಮೇಶ್