ಮುಂಬೈ: ಕಳೆದ ಕೆಲವು ದಿನಗಳ ಹಿಂದೆ ನಟ ರಾಜ್‌ಕುಮಾರ್ ರಾವ್ ಅವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಜತೆಗೆ ಅವರ ಫೋಟೋ ಕೂಡ ವೈರಲ್ ಆಗಿತ್ತು. ಫೋಟೋವನ್ನು ನೋಡಿ ನೆಟ್ಟಿಗರು ರಾಜಕುಮಾರ್ ರಾವ್ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಬಾಲಿವುಡ್ನಲ್ಲಿ ಸೀರಿಯಲ್ ಕಿಸ್ಸರ್ ಎಂದು ಕರೆಯಲ್ಪಡುವ ಇಮ್ರಾನ್ ಹಶ್ಮಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ನೀಡಿದ ಸಂದರ್ಶವೊಂದರಲ್ಲಿ ಇಮ್ರಾನ್ ಹಶ್ಮಿ ಅವರನ್ನು ಸೆಲಿಬ್ರಿಟಿಗಳು ಪ್ಲಾಸ್ಟಿಕ್ ಸರ್ಜರಿಗೆ ಏಕೆ ಮಾಡಿಸುತ್ತಾರೆ ಎಂದು ಕೇಳಲಾಯಿತು. ಅದಕ್ಕೆ ನಟ ಇಮ್ರಾನ್ ಖಾನ್ ಹೆಸರನ್ನು ಹೇಳುವಂತೆ ಕೇಳಿದರು. ರಾಜಕುಮಾರ್ ರಾವ್ ಅವರ ಹೆಸರನ್ನು ಉಲ್ಲೇಖಿಸುತ್ತಿದ್ದಂತೆ ಇಮ್ರಾನ್ ನಗುತ್ತಾ ಮುಖ ಮುಚ್ಚಿಕೊಂಡೆ ಹೌದು ಎಂದು ಹೇಳಿದರು.
ಇದು ಸತ್ಯ. ಅಂದರೆ ಕಾಸ್ಮೆಟಿಕ್ ವ್ಯಾಪಾರ, ಚೆನ್ನಾಗಿ ಮಾರ್ಕೆಟ್ ಮಾಡಿರುವ ವಿಷಯ. ಇಂಡಸ್ಟ್ರಿಯಲ್ಲಿ ಮಾತ್ರವಲ್ಲ, ಪ್ರತಿಯೊಬ್ಬರೂ ಪೋಸ್ಟರ್ನಲ್ಲಿರುವ ಹುಡುಗ ಅಥವಾ ಹುಡುಗಿಯಂತೆ ಕಾಣಲು ಬಯಸುತ್ತಾರೆ. ಇದು ಸೌಂದರ್ಯದ ವ್ಯಾಖ್ಯಾನವಾಗಿ ಮಾರ್ಪಟ್ಟಿದೆ, ಅಲ್ಲವೇ? ಅದಕ್ಕೆ ತಕ್ಕಂತೆ ನಿಮ್ಮನ್ನು ನೀವು ರೂಪಿಸಿಕೊಳ್ಳಲು ಬಯಸುತ್ತೀರಿ. ಏಕೆಂದರೆ ಅದು ನಿಮ್ಮ ಬಗ್ಗೆ ಒಳ್ಳೆಯ ಭಾವನೆ ಮೂಡಿಸುತ್ತದೆ ಎಂದು ಹೇಳಿದರು.
ಫೆಬ್ರವರಿಯಲ್ಲಿ ರಾಜ್‌ಕುಮಾರ್ ರಾವ್ ಅವರ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಅವರ ಗಲ್ಲವು ಉದ್ದವಾಗಿ ಕಾಣಿಸಿಕೊಂಡಿತು. ಈ ಫೋಟೋ ನೆಟ್ಟಿಗರು ರಾಜ್‌ಕುಮಾರ್‌ಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರಾ ಎಂದು ಕುತೂಹಲ ವ್ಯಕ್ತಪಡಿಸಿದ್ದರು. ವೈರಲ್ ಫೋಟೋ ನೋಡಿ ನಕಲಿ ಪೋಟೋ, ಅದು ನಾನಲ್ಲ ಎಂದು ಹೇಳಿ ಊಹಾಪೋಹಗಳನ್ನು ರಾಜ್‌ಕುಮಾರ್ ತಿರಸ್ಕರಿಸಿದ್ದರು.
ಇತ್ತೀಚೆಗಷ್ಟೇ ಟೈಗರ್ 3 ಚಿತ್ರದಲ್ಲಿ ಇಮ್ರಾನ್ ಹಶ್ಮಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಇಮ್ರಾನ್ ಹಶ್ಮಿ ಪ್ರಸ್ತುತ ಅವರ ಸರಣಿ ‘ಶೋಟೈಮ್’ ಮೊದಲ ಸೀಸನ್‌ನ ಎರಡನೇ ಭಾಗವು ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾಗಿದೆ. (ಏಜೆನ್ಸೀಸ್)