Government employees 
ನ್ಯೂಸ್

ತನ್ನ ನೌಕರರಿಗೆ ಮಹತ್ವದ ಸೂಚನೆ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕರೊನಾ ಸೋಂಕು ಪ್ರಕರಣಗಳ ಬೆನ್ನಲ್ಲೇ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಮಹತ್ವದ ಸೂಚನೆ ಹೊರಡಿಸಿದೆ.

45 ವರ್ಷ ವಯಸ್ಸು ಮೀರಿದ ಎಲ್ಲ ಕೇಂದ್ರ ಸರ್ಕಾರಿ ನೌಕರರು ಕಡ್ಡಾಯವಾಗಿ ಕರೊನಾ ಲಸಿಕೆ ತೆಗೆದುಕೊಳ್ಳಬೇಕು. ಈ ಮೂಲಕ ಕರೊನಾ ತಡೆಗಟ್ಟಲು ನೆರವಾಗಬೇಕು ಎಂದು ಮಂಗಳವಾರ ಸೂಚನೆ ಹೊರಡಿಸಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗಳು ನಿಗಾ ವಹಿಸಲಿವೆ ಎಂದು ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಹೇಳಿದೆ.

ಭಾರತದಲ್ಲಿ ಇಂದು 96,982 ಹೊಸ ಕರೊನಾ ಸೋಂಕಿತ ರೋಗಿಗಳು ಕಂಡು ಬಂದಿದ್ದಾರೆ. 442 ಜನ ಮೃತಪಟ್ಟಿದ್ದಾರೆ.