ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ವಾರ್ಷಿಕ ಬಜೆಟ್ ಮಂಡಿಸಿದರು. ಸತೀಶ್, ಮೋಹಿನಿ, ಮಹೇಶ್, ಶೀಲಾ, ಸಂಜೀವ ಇದ್ದರು. 
ನ್ಯೂಸ್

ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು

ಶಿವಶಂಕರ್ ಎಂ. ಹೆಬ್ಬಳ್ಳ

ಸೋ.ಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಭರವಸೆ

ಸೋಮವಾರಪೇಟೆ : ಪಟ್ಟಣ ಪಂಚಾಯಿತಿಯ 2025-26 ನೇ ಸಾಲಿನ ವಾರ್ಷಿಕ ಬಜೆಟ್ ಸಭೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.

ಪ್ರಸಕ್ತ ಸಾಲಿನಲ್ಲಿ 2.71 ಲಕ್ಷ ರೂ. ಉಳಿತಾಯ ನಿರೀಕ್ಷಿಸಲಾಗಿದ್ದು, ಪಟ್ಟಣದ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಅಧ್ಯಕ್ಷೆ ಜಯಂತಿ ಶಿವಕುಮಾರ್ ಹೇಳಿದರು.

ಒಟ್ಟು 1063.19 ಲಕ್ಷ ರೂ.ಗಳ ಆದಾಯ ನಿರೀಕ್ಷಿಸಿದ್ದು, 1060.48 ಲಕ್ಷ ರೂ.ಗಳ ಖರ್ಚು ಅಂದಾಜಿಸಲಾಗಿದೆ. ವೇತನ, ವಿದ್ಯುತ್, ವಾಣಿಜ್ಯ ಮಳಿಗೆ ಬಾಡಿಗೆ, ಎಸ್‌ಎಫ್‌ಸಿ, ಉದ್ದಿಮೆ ಪರವಾನಗಿ, ಕಟ್ಟಡ ಪರವಾನಗಿ, ನೀರಿನ ಕಂದಾಯ, ಆಸ್ತಿ ತೆರಿಗೆ, ಗೃಹಭಾಗ್ಯ, 15ನೇ ಹಣಕಾಸು, ವಿಶೇಷ ಅನುದಾನ, ಡಿಪಿಆರ್, ಕುಡಿಯುವ ನೀರಿನ ಅನುದಾನ, ಎನ್‌ಡಿಆರ್‌ಎಫ್ ಪ್ರಕೃತಿ ವಿಕೋಪ ಅನುದಾನ, ನಿವೇಶನ ಖರೀದಿ ಅನುದಾನ, ಸ್ಮಶಾನ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಸಂಸದರು, ಶಾಸಕರ ನಿಧಿಯಿಂದ ಅನುದಾನಗಳನ್ನು ನಿರೀಕ್ಷಿಸಲಾಗಿದೆ ಎಂದರು.

ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿರುವ ಬಜೆಟ್ ಮಂಡಿಸಿದ್ದು, ಎಲ್ಲ ಕಾರ್ಯಕ್ರಮ, ಯೋಜನೆಗಳ ಅನುಷ್ಠಾನಕ್ಕೆ ಆಡಳಿತ ಮಂಡಳಿ ಬದ್ಧವಾಗಿದೆ. ಸಾರ್ವಜನಿಕರು ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಬೇಕಿದೆ ಎಂದು ಮನವಿ ಮಾಡಿದರು.

ಮುಖ್ಯಾಧಿಕಾರಿ ಸತೀಶ್, ಉಪಾಧ್ಯಕ್ಷೆ ಮೋಹಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್. ಮಹೇಶ್, ಸದಸ್ಯರಾದ ಬಿ.ಸಂಜೀವ, ಮೃತ್ಯುಂಜಯ, ಬಿ.ಸಿ. ವೆಂಕಟೇಶ್, ಶೀಲಾ ಡಿಸೋಜ, ಪಿ.ಕೆ. ಚಂದ್ರು, ನಾಗರತ್ನಾ, ಜೀವನ್, ನಾಮನಿರ್ದೇಶನ ಸದಸ್ಯರಾದ ಎಚ್.ಎ. ನಾಗರಾಜು, ಡಿ.ಯು. ಕಿರಣ್, ಇದ್ದರು.