ಕೋಲಾರದ ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷ ನಾಗನಂದ ಕೆಂಪರಾಜ್ ಅಧಿಕಾರ ಸ್ವೀಕರಿಸಿದರು. ರಾಜೇಂದ್ರ, ಶ್ರೀಧರ್, ರಾಮಚಂದ್ರಪ್ಪ, ಸುಧಾಕರ್ ಇದ್ದರು. 
ನ್ಯೂಸ್

ಆರೋಗ್ಯ, ಶಿಕ್ಷಣ, ಪರಿಸರ ಸೇವೆಗೆ ಒತ್ತು

ಕಿರುವಾರ ಎಸ್.ಸುದರ್ಶನ್

ಕೋಲಾರ: ಸಾಮಾಜಿಕ ಸೇವೆ ಮಾಡಲು ರೋಟರಿ ಸಂಸ್ಥೆಯು ಅವಕಾಶ ಕಲ್ಪಿಸಿದ್ದು, ಪ್ರಸಕ್ತ ಸಾಲಿನ ಅವಧಿಯಲ್ಲಿ ಆರೋಗ್ಯ, ಪರಿಸರ ಮತ್ತು ಶಿಕ್ಷಣ ಸೇವೆಗೆ ಒತ್ತು ನೀಡಲಾಗುವುದು ಎಂದು ರೋಟರಿ ಕ್ಲಬ್ ನೂತನ ಅಧ್ಯಕ್ಷ ನಾಗನಂದ ಕೆಂಪರಾಜ್ ಹೇಳಿದರು.

ನಗರದ ರೋಟರಿ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಮನುಷ್ಯನಿಗೆ ಹುಟ್ಟು-ಸಾವು ಖಚಿತ, ಮಧ್ಯದ ಅವಧಿಯಲ್ಲಿ ಹೆಸರು ಶಾಶ್ವತವಾಗಿ ಉಳಿಯಲು ಉತ್ತಮ ಸೇವೆ ಮಾಡಿದಾಗ ಸಾಧ್ಯ. ಇದ್ದರಿಂದ ಜೀವನಪರ್ಯಂತ ಸೇವೆ ಮುಂದುವರಿಸುವುದಾಗಿ ತಿಳಿಸಿದರು.
ಸಮಾಜಸೇವೆ ದೇವರ ಸೇವೆಯಾಗಿದ್ದು, ಅದು ಒಳ್ಳೆಯ ಮನಸ್ಸು ಇರುವ ಜನರ ಬಳಿ ಮಾತ್ರವೇ ಇರುತ್ತದೆ. ಸಾಮಾಜಿಕ ಸೇವೆ ಮಾಡಲು ರೋಟರಿ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿರುವುದು ನನ್ನ ಪುಣ್ಯ. ರೋಟರಿ ಸಂಸ್ಥೆ ವಿಶ್ವದಲ್ಲಿ ಹೆಚ್ಚು ಸೇವೆ ಮತ್ತು ಸೇವಾ ಮನೋಭಾವ ರೂಢಿಸಿಕೊಂಡಿರುವ ಸಂಸ್ಥೆಯಾಗಿ ಹೊರಹೊಮ್ಮಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಕೋರಿದರು.
ಪ್ರತಿಯೊಬ್ಬರ ಜೀವನದಲ್ಲಿ ಸಾಧನೆ ಮಾಡಿ, ಇತರರಿಗೆ ಮಾದರಿಯಾಗುವಂತೆ ಜೀವನ ರೂಪಿಸಿಕೊಳ್ಳೋಣ. ಶಿಕ್ಷಣ ಆರೋಗ್ಯ ಮತ್ತು ಪರಿಸರ ಸೇವೆಗಳಿಗೆ ಹೆಚ್ಚು ಪಾತ್ರವನ್ನು ವಹಿಸುತ್ತೇನೆ. ವಿಶೇಷವಾಗಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ, ಬಡವರ ಆರೋಗ್ಯ ಕಾಪಾಡುವ ಹಾಗೂ ಪರಿಸರ ಸಂರಕ್ಷಣೆ ಮಾಡಲು ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ರೋಟರಿ ಪ್ರಾಂತಪಾಲ ಶ್ರೀಧರ್, ಸಹ ಪ್ರಾಂತಪಾಲ ರಾಜೇಂದ್ರ, ಮಾಜಿ ಅಧ್ಯಕ್ಷ ರವೀಂದ್ರನಾಥ್, ಕಾರ್ಯದರ್ಶಿ ಎಸ್.ವಿ.ಸುಧಾಕರ್, ಮುಖಂಡರಾದ ಅ.ಮು.ಲಕ್ಷ್ಮೀನಾರಾಯಣ, ರಾಮಚಂದ್ರಪ್ಪ, ಸಿಎಂಆರ್ ಶ್ರೀನಾಥ್, ಚಂದ್ರಶೇಖರ್, ಶಿವಕುಮಾರ್ ಇದ್ದರು.