ನವದೆಹಲಿ : 'ಜೈಕೋವಿ-ಡಿ' ಎಂಬ ತನ್ನ ಕರೊನಾ ಲಸಿಕೆಗೆ ತುರ್ತು ಬಳಕೆ ಪರವಾನಗಿಗಾಗಿ ಜೈಡಸ್ ಕಾಡಿಲಾ ಔಷಧ ಕಂಪೆನಿ ಅರ್ಜಿ ಸಲ್ಲಿಸಿದೆ. ಈ ನಿಟ್ಟಿನಲ್ಲಿ ಈ ಪ್ಲಾಸ್ಮಿಡ್ ಡಿಎನ್ಎ ವ್ಯಾಕ್ಸಿನ್ನಿನ ಪ್ರಯೋಗಗಳ ಫಲಿತಾಂಶಗಳನ್ನು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯ(ಡಿಸಿಜಿಐ) ಕಛೇರಿಗೆ ಸಲ್ಲಿಸಿದೆ ಎಂದು ಕಂಪೆನಿ ಸುದ್ದಿಗಾರರಿಗೆ ತಿಳಿಸಿದೆ.
ಜೈಕೋವಿ-ಡಿ ಲಸಿಕೆಗೆ 50ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಅತಿದೊಡ್ಡ ಪ್ರಮಾಣದ ಕ್ಲಿನಿಕಲ್ ಟ್ರಯಲ್ಅನ್ನು ನಡೆಸಲಾಗಿದೆ. ಲಸಿಕೆಯನ್ನು 12 ರಿಂದ 18 ವರ್ಷ ವಯೋಮಾನದವರ ಮೇಲೂ ಪ್ರಯೋಗ ಮಾಡಲಾಗಿದ್ದು, ಈ ಗುಂಪಿನಲ್ಲಿ 1000 ಜನರು ಲಸಿಕೆ ಪಡೆದಿದ್ದಾರೆ. ಈ ವಯೋಮಾನದ ಅಭ್ಯರ್ಥಿಗಳಿಗೆ ಮತ್ತು ವಯಸ್ಕರಿಗೆ ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ತಿಳಿದುಬಂದಿದೆ ಎನ್ನಲಾಗಿದೆ.
ಈ ಲಸಿಕೆಗೆ ಪರವಾನಗಿ ಸಿಕ್ಕಲ್ಲಿ ಇದು 12 ರಿಂದ 18 ವರ್ಷದ ಗುಂಪಿನ ಜನರಿಗೆ ಭಾರತದಲ್ಲಿ ಲಭ್ಯವಾಗುವ ಮೊದಲ ಲಸಿಕೆಯಾಗಲಿದೆ. ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ನ ನಂತರ ಅನುಮೋದನೆ ಗಳಿಸುವ ಮೂರನೇ ದೇಶೀಯ ಕರೊನಾ ಲಸಿಕೆಯಾಗಲಿದೆ. (ಏಜೆನ್ಸೀಸ್)