ಸೋಮವಾರಪೇಟೆ: ವೀರಶೈವ ಸಮಾಜದ ವತಿಯಿಂದ ತ್ರಿವಿಧ ದಾಸೋಹಿ ಕಾಯಕಯೋಗಿ ಪದ್ಮಭೂಷಣ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 118ನೇ ಜಯಂತಿಯನ್ನು ಆಚರಿಸಲಾಯಿತು.
ನಿವೃತ್ತ ಉಪನ್ಯಾಸಕ ಬಿ.ಪಿ. ಸರ್ವಜ್ಞ ಮೂರ್ತಿ ಮಾತನಾಡಿ, ಶಿವಕುಮಾರ ಸ್ವಾಮೀಜಿ ಅವರು ಸಿದ್ಧಗಂಗಾ ಮಠಾಧೀಶರಾಗಿ ತ್ರೀವಿಧ ದಾಸೋಹಿಯಾಗಿ ಸಿದ್ಧಗಂಗಾ ಕ್ಷೇತ್ರದಲ್ಲಿ ಲಕ್ಷಾಂತರ ಜನರು ವಿದ್ಯಾವಂತರಾಗಲು ಕಾರಣೀಭೂತರಾದರು. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕೆಂದರು.
ಇದೇ ಸಂದರ್ಭದಲ್ಲಿ ಕಟ್ಟೆ ಬಸವೇಶ್ವರ ದೇವಾಲಯದಲ್ಲಿ ಮಂಗಳವಾರ ಎಡೆಪರು ಆಚರಿಸಿ, ಮಳೆಬೆಳೆಗಾಗಿ ಪ್ರಾರ್ಥಿಸಲಾಯಿತು. ವೀರಶೈವ ಸಮಾಜದ ಯಜಮಾನ ಬಿ.ಪಿ. ಶಿವಕುಮಾರ್, ಶೆಟ್ರು ಮೃತ್ಯುಂಜಯ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
--------