ನ್ಯೂಸ್

ಹೆಚ್ಚು ಸಮಯ ಕೆಲಸ ಮಾಡಿ ಇಲ್ಲಾಂದರೆ ಕೆಲಸಾನೆ ಬಿಡಿ: ಎಲಾನ್​ ಮಸ್ಕ್​!

ನವದೆಹಲಿ: ಈಗಾಗಲೇ ಟ್ವಿಟರ್​ನಲ್ಲಿ ಬೇಕಾದ ಹಾಗೆ ಬದಲಾವಣೆ ಮಾಡುತ್ತಿರುಬವ ಎಲಾನ್​ ಮಸ್ಕ್​ 3800 ಉದ್ಯೋಗಿಗಳನ್ನು ತೆಗೆದುಹಾಕಿದ್ದು ಎಲ್ಲ ಕಡೆ ಸುದ್ದಿಯಾಗಿತ್ತು. ತಮ್ಮ ಟ್ವೀಟ್​ಗಳಿಂದ, ಅಥವಾ ಹೊಸ ಆಲೋಚನೆಗಳಿಂದ ಸದಾ ಸುದ್ದಿಯಲ್ಲಿರುವ ಎಲಾನ್​ ಮಸ್ಕ್​ ಈಗ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದು ಆಗಿದ್ದಾರೆ.

ಈಗ ಮಸ್ಕ್​ ಟ್ವಿಟರ್​ ನೌಕರರಿಗೆ ಮೇಲ್​ ಕಳಿಸಿದ್ದು ಅದರಲ್ಲಿ ಹೆಚ್ಚು ಕೆಲಸ ಮಾಡಿ, ಆಗಲ್ಲಾ ಅಂದರೆ ಕೆಲಸ ಬಿಡಿ ಎಂದು ಹೇಳಿದ್ದಾರೆ. 'ಟ್ವಿಟರ್ 2.0 ಅನ್ನು ನಿರ್ಮಿಸಿ ಯಶಸ್ವಿಯಾಗಲು ಹೆಚ್ಚುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ, ನಾವು ಅತ್ಯಂತ ಹಾರ್ಡ್‌ಕೋರ್ ಆಗಿರಬೇಕು. ಇದರರ್ಥ ಹೆಚ್ಚಿನ ಗಂಟೆಗಳ ಕಾಲ ಹೆಚ್ಚಿನ ಪರಿಶ್ರಮ ಹಾಕಿ ಕೆಲಸ ಮಾಡುವುದು. ಅಸಾಧಾರಣ ಕಾರ್ಯಕ್ಷಮತೆ ಇದ್ದರೆ ಮಾತ್ರ ನೀವು ಇಲ್ಲಿ ಉತ್ತೀರ್ಣರಾದಂತೆ' ಎಂದು ಮೇಲ್ ನಲ್ಲಿ ಬರೆಯಲಾಗಿದೆ.

ಅಂದಹಾಗೆ ಈ ಮೇಲ್​ನ ಹೆಸರು 'ಎ ಫೋರ್ಕ್​ ಇನ್​ ದ ರೋಡ್​'ಎಂದು ವಿಚಿತ್ರವಾಗಿ ಇಡಲಾಗಿದೆ. ಮುಂದಿನ ದಿನಗಳಲ್ಲಿ ತೀವ್ರ ಗತಿಯಲ್ಲಿ ಕೆಲಸ ನಡೆಯಲಿದ್ದು 'ಹೊಸ ಟ್ವಿಟರ್​'ಅನ್ನು ಸೇರಲು ಇಚ್ಛಿಸದ ನೌಕರರು ಮೂರು ತಿಂಗಳ ಕಾಲ ಸಂಸ್ಥೆಗೆ ಬರಬೇಕಾಗಿಲ್ಲ ಎಂದು ಹೇಳಲಾಗಿದೆ. (ಏಜೆನ್ಸೀಸ್​)