ನ್ಯೂಸ್

ಟ್ವಿಟರ್‌ನಲ್ಲಿ ವಿಡಿಯೋ, ಆಡಿಯೋ ಕಾಲ್ ಫೀಚರ್, ಆಡಿಯೋ ಕಾಲ್‌ಗೆ ಫೋನ್ ನಂಬರ್ ಅಗತ್ಯವಿಲ್ಲ..!

Twitter new feature:ಇತ್ತೀಚೆಗೆ ಎಲಾನ್ ಮಸ್ಕ್ ಟ್ವಿಟರ್ ಲೋಗವನ್ನು X ಎಂದು ಬದಲಿಸಿದ್ದರು. ನೀಲಿ ಹಕ್ಕಿಗಳ ಲೋಗೋ ಇದೀಗ ಬದಲಾಗಿದೆ. ಇನ್ನು ಟ್ವೀಟ್ ಎಂದು ಕರೆಯುತ್ತಿದ್ದ ಸಂದೇಶಗಳಿಗೆ ಇನ್ನು ಮುಂದೆ ಎಕ್ಸಸ್ ಎಂದು ಕರೆಯಬಹುದುಎಂದು ಮಸ್ಕ್ ಹೇಳಿದ್ದರು.


ಇದೀಗ X(ಟ್ವಿಟರ್) ಹೊಸ ಫೀಚರ್ ಘೋಷಿಸಿದ್ದಾರೆ. ಇನ್ನು ಮುಂದೆ ಟ್ವಿಟರ್‌ನಲ್ಲೇ ವಿಡಿಯೋ, ಆಡಿಯೋ ಕಾಲ್ ಮಾಡಲು ಸಾಧ್ಯವಿದೆ. ಹೊಸ ಫೀಚರ್ ಪರಿಚಯಿಸುವ ಮೂಲಕ ವ್ಯಾಟ್ಸ್ಆ್ಯಪ್‌ಗೆ ಮಸ್ಕ್ ಠಕ್ಕರ್ ನೀಡಿದ್ದಾರೆ.


ಇನ್ನು ಮುಂದೆ X ಮೂಲಕ ಬಳಕೆದಾರರು ವಿಡಿಯೋ, ಆಡಿಯೋಕಾಲ್ ಮಾಡಲು ಸಾಧ್ಯವಿದೆ. ಟ್ವಿಟರ್‌ನಲ್ಲಿ ಇದೀಗ ಆಡಿಯೋ ಹಾಗೂ ವಿಡಿಯೋ ಕಾಲ್ ಫೀಚರ್ ಪರಿಚಯಿಸಲಾಗುತ್ತಿದೆ. ವಿಶೇಷ ಅಂದರೆ ಈ ವಿಡಿಯೋ, ಆಡಿಯೋ ಕಾಲ್‌ಗೆ ಫೋನ್ ನಂಬರ್ ಅಗತ್ಯವಿಲ್ಲ. ಟ್ವಿಟರ್ ಲಾಗಿನ್ ಆಗಿದ್ದರೆ ಸಾಕು.
X ಇದೀಗ ಹೊಸ ಫೀಚರ್ ಪರಿಚಯಿಸಲು ಸಜ್ಜಾಗಿದೆ. X ಮೂಲಕ ಬಳಕೆದಾರರು ವಿಡಿಯೋ, ಆಡಿಯೋ ಕಾಲ್ ಮಾಡಬಹುದು.

ಈ ವಿಶೇಷ ಫೀಚರ್‌ಗೆ ಯಾವುದೇ ಫೋನ್ ನಂಬರ್ ಅಗತ್ಯವಿಲ್ಲ. ಯಾರಿಗೆ ಕರೆ ಮಾಡಬೇಕು, ಅವರ X ಖಾತೆ ಕ್ಲಿಕ್ ಮಾಡಿ ಆಡಿಯೋ ಅಥವಾ ವಿಡಿಯೋ ಕಾಲ್ ಆಯ್ಕೆ ಮಾಡಿಕೊಂಡರೆ ಸಾಕು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.