ನ್ಯೂಸ್

ಎಲಾನ್​ ಮಸ್ಕ್ ಮತ್ತೆ ನಂ.1 ಶ್ರೀಮಂತ: ಗೌತಮ್ ಅದಾನಿಗೆ ಎಷ್ಟೇ ಸ್ಥಾನ?

ನವದೆಹಲಿ: ಕಳೆದ ಎರಡು ತಿಂಗಳಿಂದ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಟ್ವಿಟರ್ ಸಿಇಒ ಎಲನ್ ಮಸ್ಕ್ ಮತ್ತೆ ನಂ.1 ಶ್ರೀಮಂತ ಪಟ್ಟ ಅಲಂಕರಿಸಿದ್ದಾರೆ.

ಬ್ಲೂಮ್​ಬರ್ಗ್​ ಜಾಗತಿಕ ಬಿಲಿಯನೇರ್ ಸೂಚ್ಯಂಕದಲ್ಲಿ ಫ್ರಾನ್ಸ್​ನ ಐಷಾರಾಮಿ ಬ್ರ್ಯಾಂಡ್​ ಲೂಯಿ ವಿಟಾನ್​ನ ಸಿಇಒ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿದ್ದಾರೆ.

ಯಾರಿಗೆ ಯಾವ ಸ್ಥಾನ

ಅಮೆಜಾನ್​ನ ಜೆಫ್ ಬಿಜೋಸ್ 3ನೇ ಸ್ಥಾನ, ಮೈಕ್ರೋಸಾಫ್ಟ್​ನ ಬಿಲ್ ಗೇಟ್ಸ್ 4, ಬರ್ಕ್​ಶೈರ್ ಹಾಥ್​ವೇಯ ವಾರೆನ್ ಬಫೆಟ್ 5, ಒರಾಕಲ್​ನ ಲ್ಯಾರಿ ಎಲಿಸನ್ 6, ಮೈಕ್ರೋಸಾಫ್ಟ್​ನ ಸ್ಟೀವ್ ಬಾಲ್​ವಾರ್ 7, ಗೂಗಲ್​ನ ಲ್ಯಾರಿಪೇಜ್ 8, ಅಮೆರಿಕ ಮೊವಿಲ್, ಟೆಲೈಕ್ ಗ್ರೂಪ್ ಮಾಲೀಕ ಕಾಲೋಸ್ ಸ್ಕಿಮ್ 9 ಹಾಗೂ ಭಾರತದ ಮುಕೇಶ್ ಅಂಬಾನಿ 10ರಲ್ಲಿದ್ದಾರೆ. ಕೆಲ ಸಮಯದ ಹಿಂದೆ 3ನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಈಗ 32ನೇ ಸ್ಥಾನಕ್ಕೆ ಕುಸಿದಿದ್ದಾರೆ.

* ಟೆಸ್ಲಾ ಇಂಕ್ ಷೇರು ಮೌಲ್ಯ ಶೇ.100ರಷ್ಟು ಏರಿಕೆ ಕಂಡ ಹಿನ್ನೆಲೆಯಲ್ಲಿ ಮಸ್ಕ್ ಮತ್ತೆ ನಂ.1.

* ಬ್ಲೂಮ್​ಗ್ ಸೂಚ್ಯಂಕದ ಪ್ರಕಾರ 2023 ಫೆ.28ಕ್ಕೆ ಮಸ್ಕ್ ಸಂಪತ್ತು 187 ಶತಕೋಟಿ ಡಾಲರ್. ಅಂದರೆ ಅವರ ಒಟ್ಟು ಆಸ್ತಿಯಲ್ಲಿ 50 ಶತಕೋಟಿ ಡಾಲರ್ ಅಥವಾ ಶೇ. 36 ರಷ್ಟು ಹೆಚ್ಚಳ ಕಂಡುಬಂದಿದೆ.

* ಕಳೆದ ನವೆಂಬರ್ ಮತ್ತು ಡಿಸೆಂಬರ್​ನಲ್ಲಿ ಮಸ್ಕ್ ನಿವ್ವಳ ಆಸ್ತಿ 200 ಶತಕೋಟಿ ಡಾಲರ್​ಗಿಂತ ಹೆಚ್ಚು ಕುಸಿದಿತ್ತು. ಈ ಮೂಲಕ ಅತಿ ಹೆಚ್ಚು ಆಸ್ತಿ ಕಳೆದುಕೊಂಡ ವಿಶ್ವದ ಮೊದಲ ವ್ಯಕ್ತಿ ಎಂಬ ಗಿನ್ನಿಸ್ ದಾಖಲೆ ಅವರ ಹೆಸರಿನಲ್ಲಿತ್ತು.

* ಬರ್ನಾರ್ಡ್ ಸಂಪತ್ತು 185 ಶತಕೋಟಿ ಡಾಲರ್.