ನ್ಯೂಸ್

ಇದು ನಾಯಿ ತಾಕತ್​..ಆನೆಯೂ ಪಕ್ಕಕ್ಕೆ ಹೋಗ್ಲೇಬೇಕಾದ್ದೇ!?

ಬೆಂಗಳೂರು: ದೈತ್ಯ ದೇಹ ಹೊಂದಿರುವ ಆನೆಗಳು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ ಎನ್ನುತ್ತಾರೆ ಅವುಗಳನ್ನು ಹತ್ತಿರದಿಂದ ನೋಡಿದವರು. ಅವುಗಳನ್ನು ಪ್ರಚೋದಿಸದ ಹೊರತು ಇತರ ಜೀವಿಗಳಿಗೆ ಹಾನಿ ಮಾಡುವುದಿಲ್ಲ. ಆನೆಗಳೂ ಸಣ್ಣ ಪ್ರಾಣಿಗಳನ್ನು ನೋಡಿದಾಗ ಭಯಪಡುತ್ತವೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗಿದೆ. ಇದರಲ್ಲಿ ಆನೆ ನಡೆದುಕೊಂಡ ರೀತಿ ನೆಟ್ಟಿಗರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.

ವೀಡಿಯೊದಲ್ಲಿ ಕಂಡುಬರುವಂತೆ, ನಾಯಿಯೊಂದು ಗಾಢ ನಿದ್ದೆಯಲ್ಲಿದ್ದಾಗ ಸಾಕು ಆನೆಯೊಂದು ನಡೆದುಕೊಂಡು ಅದರ ಕಡೆ ಬರುತ್ತದೆ. ಆದರೆ ದಾರಿಯಲ್ಲಿ ನಾಯಿಯನ್ನು ಅದು ಗಮನಿಸಲಿಲ್ಲ. ಆನೆ ಸದ್ದು ಮಾಡಿದರೂ ನಾಯಿ ಕೂಡ ಬೇಗ ಏಳಲಿಲ್ಲ.

ಆನೆ ಇನ್ನೇನು ತನ್ನ ಮೇಲೆ ಹೆಜ್ಜೆ ಇಟ್ಟಿತು ಎನ್ನುವಾಗ ನಾಯಿಗೆ ಇದ್ದಕ್ಕಿದ್ದಂತೆ ಎಚ್ಚರವಾಗಿದೆ. ಅಲ್ಲಿಯವರೆಗೂ ನಾಯಿಯನ್ನು ನೋಡದೆ ಹೊರಟಿದ್ದ ಆನೆಗೆ ಏಕಾಏಕಿ ನಾಯಿ ಎಚ್ಚರಗೊಂಡಿದ್ದರಿಂದ ಗಾಬರಿಯಾಗಿದೆ. ಕೂಡಲೇ ಅದು ಹೆದರಿ ಎರಡು ಹೆಜ್ಜೆ ಹಿಂದೆ ಹಾಕಿದೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಆನೆಯ ಹೆಸರು ಲಾನಾ ಮತ್ತು ಅದು ಒಂಬತ್ತು ವರ್ಷ ಎಂದು ವಿಡಿಯೋದಲ್ಲಿ ಇದನ್ನು ಚಿತ್ರೀಕರಿಸಿರುವ ಮಹಿಳೆ ಹೇಳುತ್ತಾರೆ. ಅದು ತನ್ನ ಸಾಕು ಆನೆ ಎಂದೂ ಆಕೆ ಹೇಳುತ್ತಾಳೆ.

ಲಾನಾ(ಹೆಣ್ಣಾನೆ) ತುಂಬಾ ಮೃದು ಸ್ವಭಾವದವಳು. ಅವಳು ನಾಯಿಗಳಿಗೆ ಹೆದರುತ್ತಾಳೆ ಎಂದು ಆ ಮಹಿಳೆ ಹೇಳುತ್ತಾಳೆ.

ನಾಯಿಯನ್ನು ಕಂಡಾಗ ಅದು ಧೈರ್ಯಕ್ಕಾಗಿ ತನ್ನ ಕಡೆಗೆ ಓಡಿತು ಎಂದು ಆಕೆ ಹೇಳಿದ್ದಾಳೆ.

ಜನರು ಈ ವೀಡಿಯೊವನ್ನು ಅಪಾರವಾಗಿ ಇಷ್ಟಪಟ್ಟಿದ್ದಾರೆ. ಆನೆಗಳು ಸ್ವಾಭಾವಿಕವಾಗಿ ಶಾಂತ ಮತ್ತು ಸೌಮ್ಯವಾಗಿರುತ್ತವೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ವಿವಿಧ ಕಾಮೆಂಟ್‌ಗಳ ನಡುವೆ ವಿಡಿಯೋ ವೈರಲ್ ಆಗಿದೆ.