ನ್ಯೂಸ್

ದೇವಸ್ಥಾನ ಉತ್ಸವದಲ್ಲಿ ಕೆರಳಿದ ಆನೆ! 20ಕ್ಕೂ ಅಧಿಕ ಮಂದಿಗೆ ಗಾಯ..kerala

ಕೇರಳ: ( kerala ) ದೇವಾಲಯದ ಹಬ್ಬಕ್ಕೆ ಕರೆಸಿದ್ದ ಆನೆ ಇದ್ದಕ್ಕಿದ್ದಂತೆ ಜನರ ಬಳಿ ನುಗ್ಗಿದ್ದು ಪುಂಡಾಟ ಮೆರೆದಿದೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರ್‌ನಲ್ಲಿ  ಈ ಘಟನೆ ನಡೆದಿದೆ.

ತಿರೂರ್‌ನ ಪುತಿಯಂಗಡಿ ವಾರ್ಷಿಕ ಹಬ್ಬದ ಹಿನ್ನೆಲೆಯಲ್ಲಿ ಮೆರವಣಿಗೆಗಾಗಿ ಆನೆಗಳನ್ನ ಕರೆಸಲಾಗಿತ್ತು. ಗುಂಪಿನ ಮಧ್ಯೆ ಒಂದು ಆನೆಗೆ ಮದವೇರಿದ್ದು, ಮುಂದೆ ನಿಂತಿದ್ದ ಜನರ ಮೇಲೆ ದಾಳಿ ಮಾಡಿದೆ. ಈ ಭಯಾನಕ ದೃಶ್ಯ ಸೆರೆಯಾಗಿದ್ದು, ನೋಡೋದಕ್ಕೂ ಮೈ ಜುಮ್ಮೆನ್ನಿಸುವಂತಿದೆ.

ಮಾವುತ ಎಷ್ಟೇ ಕಷ್ಟಪಟ್ಟರು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಓರ್ವ ವ್ಯಕ್ತಿಯನ್ನು ಸೊಂಡಿಲಿನಲ್ಲಿ ಎತ್ತಿ ಎಸೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವ್ಯಕ್ತಿಯ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಕೋಟಕ್ಕಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.