ನ್ಯೂಸ್

ಮೃತ ಮರಿಯಾನೆಯನ್ನು ಸೊಂಡಿಲಿನಿಂದ ಹೊತ್ತೊಯ್ಯುತ್ತಿರುವ ತಾಯಿ Elephant ಭಾವನಾತ್ಮಕ  ವಿಡಿಯೋ

Elephant: ತಾಯಿ ಆನೆಯೊಂದು ತನ್ನ ಸತ್ತ ಮರಿಯಾನೆಯ ದೇಹವನ್ನು ತನ್ನ ಸೊಂಡಿಲಿನಿಂದ ಎಳೆದುಕೊಂಡು ಹೋಗುತ್ತಿದೆ. ಈ ಹೃದಯ ವಿದ್ರಾವಕ ವಿಡಿಯೋ ನೋಡಿದವರ ಕಣ್ಣಲ್ಲಿ ನೀರು ಬಂತು. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ವಿಡಿಯೋವನ್ನು ADFO ಜಯಂತ್ ಮಂಡಲ್ ರೆಕಾರ್ಡ್ ಮಾಡಿದ್ದಾರೆ. ಇದನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ (IFS) ಪರ್ವೀನ್ ಕಸ್ವಾನ್ ಅವರು ಸಾಮಾಜಿಕ ಸೈಟ್ X ನಲ್ಲಿ ಹಂಚಿಕೊಂಡಿದ್ದಾರೆ. ಈ ಭಾವನಾತ್ಮಕ ದೃಶ್ಯವು ಕಣ್ಣೀರು ಹಾಕಿಸುವಂತಿದೆ.

ವಿಡಿಯೋದಲ್ಲಿ ಆನೆ ದುಃಖದಲ್ಲಿ ಮುಳುಗಿರುವುದನ್ನು ಕಾಣಬಹುದು. ಆನೆಯು ತನ್ನ ಸತ್ತ ಮಗುವಿನ ದೇಹದೊಂದಿಗೆ ಹಲವಾರು ದಿನಗಳವರೆಗೆ ಉಳಿದಿದೆ. ಮೃತ ದೇಹವನ್ನು ಬಿಡಲು ಸಾಧ್ಯವಾಗಲಿಲ್ಲ ಎಂದು ಹಲವರು ಹೇಳಿದ್ದಾರೆ.

ವೀಡಿಯೊಗೆ ಶೀರ್ಷಿಕೆ ನೀಡಿ, ಅಧಿಕಾರಿ ಬರೆದಿದ್ದಾರೆ, "#ತಾಯಿ ಆನೆ ತನ್ನ ಮಗುವಿನ ಸಾವನ್ನು  ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವಳು ಶವವನ್ನು ಕೆಲವು ಸಮಯ-ಕೆಲವೊಮ್ಮೆ ದಿನಗಳವರೆಗೆ ಎಳೆದುಕೊಂಡು ಹೋಗುತ್ತಾಳೆ. ಇದು ತುಂಬಾ ದುಃಖಕರವಾದ ಸಂಗತಿ." ಎಂದು ಬರೆದುಕೊಂಡು ವಿಡಿಯೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ಶೇರ್​ ಮಾಡಲಾಗಿದೆ.

ಇಲ್ಲಿಯವರೆಗೆ ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ ಮತ್ತು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ತಾಯಿಯು ತನ್ನ ಮಗುವಿನ ಮೇಲಿನ ಪ್ರೀತಿಯು..ತಾಯಿ ಜೀವಂತವಾಗಿರುವವರೆಗೂ  ಮಕ್ಕಳಿಗೆ ಯಾವುದೇ ತೊಂದರೆಯಲ್ಲಿ ಕೊಡುವುದಿಲ್ಲ. ಪ್ರಾಣಿಗಳಿಗೂ ಮನುಷ್ಯನಂತೆ ಆಳವಾದ  ದುಃಖವನ್ನು ಅನುಭವಿಸುತ್ತವೆ ಎಂಬುದನ್ನು ಈ ವೀಡಿಯೊ ತೋರಿಸಿದೆ  ಎಂದು ಕಾಮೆಂಟ್​​ ಮಾಡಿ ಬೇಸರ ಹೊರ ಹಾಕುತ್ತಿದ್ದಾರೆ.