ಕೊಯಮತ್ತೂರು: ಕಾಡಾನೆ ದಾಳಿಗೆ ಸಿಲುಕಿ ಇಟ್ಟಿಗೆ ಭಟ್ಟಿ ಕೆಲಸಗಾರನೊಬ್ಬ ಸಾವಿಗೀಡಾದ ಘಟನೆ ಪೆರಿಯಾ ತಡಗಮ್ನಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಬಾಬುಲ್ ಹುಸೇನ್ (23) ಸಾವಿಗೀಡಾದವ. ಆತ ಇತರರೊಂದಿಗೆ ದಾರಿ ತಪ್ಪಿದ ಆನೆಯನ್ನು ಓಡಿಸಲು ಪ್ರಯತ್ನಿಸಿದಾಗ ಅದು ಅವರ ಮೇಲೆ ಹಲ್ಲೆ ಮಾಡಿತು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಹುಸೇನ್ ನನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಆತ ಮೃತಪಟ್ಟಿದ್ದಾನೆ, ಮಾಹಿತಿಯ ಮೇರೆಗೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಾಡು ಪ್ರಾಣಿಗಳನ್ನು ಕಾಡಿಗೆ ಬೆನ್ನಟ್ಟುವಲ್ಲಿ ಯಶಸ್ವಿಯಾಗಿದ್ದಾರೆ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.