ನ್ಯೂಸ್

VIDEO| ಮರಿಗಳೊಂದಿಗೆ ರಸ್ತೆ ದಾಟುವುದನ್ನು ನೋಡಿಯೂ ಬಂದ ಬೈಕ್ ಸವಾರರ ವಿರುದ್ಧ ಕೆರಳಿದ ಆನೆ​: ಮೈನವಿರೇಳಿಸೋ ವಿಡಿಯೋ ಇದು!

ನವದೆಹಲಿ: ಕಾಡಿನ ನಡುವಿನ ರಸ್ತೆಯಲ್ಲಿ ಎದುರಿಗೆ ಬಂದ ಬೈಕ್​ ಸವಾರರನ್ನು ಆನೆಯೊಂದು ಅಟ್ಟಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಶ್ರೀಧರ್​.ವಿ, ಎಂಬುವರು ಸೆರೆಹಿಡಿದ ವಿಡಿಯೋವನ್ನು ಭಾರತೀಯ ಅರಣ್ಯಾಧಿಕಾರಿ ಸುಸಾಂತ್​ ನಂದ ಅವರು ತಮ್ಮ ಟ್ವಿಟರ್​​ನಲ್ಲಿ ಬುಧವಾರ ಬೆಳಗ್ಗೆ ಶೇರ್​ ಮಾಡಿಕೊಂಡಿದ್ದು, ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ವಿಡಿಯೋದಲ್ಲಿ ಏನಿದೆ?: 16 ಸೆಕೆಂಡಿನ ವಿಡಿಯೋದಲ್ಲಿ ಮರಿಗಳೊಂದಿಗೆ ಕಾಡಿನ ನಡುವಿನ ರಸ್ತೆಯನ್ನು ದಾಟುವಾಗ ಅದನ್ನು ಲೆಕ್ಕಿಸದೇ ಬಂದ ಬೈಕ್​ ಸವಾರರಿಬ್ಬರನ್ನು ನೋಡಿ ದೈತ್ಯ ಆನೆ ಕೆರಳುತ್ತದೆ. ತಕ್ಷಣ ಬೈಕ್​​ ಅನ್ನು ಅಟ್ಟಿಸಿಕೊಂಡು ಹೋದಾಗ, ಸವಾರು ಹೆದರಿ ಬೈಕ್​ ಅನ್ನು ಅಲ್ಲಿಯೇ ಬಿಟ್ಟು ಎದ್ನೋ ಬಿದ್ನೋ ಎಂಬಂತೆ ಓಡುತ್ತಾರೆ. ಇತ್ತ ಬೈಕ್​ ಬೀಳುತ್ತಿದ್ದಂತೆ ಆನೆಗೆ ಏನನ್ನಿಸುತ್ತದೋ ಏನೋ ಅದು ಕೂಡ ಕಾಡಿನ ಒಳಗಡೆ ಕಾಲ್ಕಿಳುತ್ತದೆ. ಈ ವೇಳೆ ಸ್ವಲ್ಪ ದೂರದಲ್ಲಿ ಕಾರೊಂದು ನಿಂತಿರುವುದನ್ನು ಗಮನಿಸಬಹುದು.

ವಿಡಿಯೋ ಕುರಿತು ಬರೆದುಕೊಂಡಿರುವ ಸುಸಾಂತ್​ ನಂದ ಅವರು ಮರಿಗಳೊಂದಿಗೆ ಆನೆ ರಸ್ತೆ ದಾಟುವಾಗ ಯಾರಾದರೂ ತೊಂದರೆ ನೀಡಿದರೆ ಆನೆ ನಿಜಕ್ಕೂ ಕೆರಳುತ್ತದೆ. ಒಳ್ಳೆಯ ಆನೆಯು ಕೂಡ ರಾಕ್ಷಸ ಆನೆಯಾಗಿ ದಾಳಿ ಮಾಡುತ್ತದೆ. ಅತಿರೇಖ ಸಾಕು ಎಂದು ಸಲಹೆ ನೀಡಿದ್ದಾರೆ.

ಈಗಾಗಲೇ ವಿಡಿಯೋವನ್ನು 4 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, ಸಾಕಷ್ಟು ಮಂದಿ ಕಾಮೆಂಟ್​ಗಳ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)