ಕಾಡಾನೆ ದಾಳಿಗೆ ಅಡಕೆ ಹಾನಿಗೀಡಾದ ತೋಟಕ್ಕೆ ಶಾಸಕಿ ಶಾರದಾ ಪೂರ್ಯಾನಾಯ್ಕ ಭೇಟಿ ನೀಡಿ ಪರಿಶೀಲಿಸಿದರು. ಬಸಪ್ಪ ಗೌಡ, ಕೆರೋಡಿ ನಾಗರಾಜ್, ನಾರಾಯಣ ಗೌಡ, ಪ್ರದೀಪ್ ಇತರರಿದ್ದರು. 
ನ್ಯೂಸ್

ಕಾಡಾನೆ ದಾಳಿ, ಗ್ರಾಮಾಂತರ ಶಾಸಕಿಯಿಂದ ಬೆಳೆ ಹಾನಿ ಪರಿಶೀಲನೆ

ಶಿವಮೊಗ್ಗ: ಬರ ನಡುವೆ ಕಾಡಾನೆಗಳ ದಾಳಿಯಿಂದ ಬೆಳೆ ಹಾನಿಗೀಡಾದ ಜಮೀನುಗಳಿಗೆ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿದರು.

ತಾಲೂಕಿನ ಮಂಜರಿಕೊಪ್ಪ, ಮಲೇಶಂಕರ, ಸಂಪಿಗೆಹಳ್ಳ, ಕೂಡಿ, ಎರೆಬೀಸು ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಅವರು, ಬೆಳೆ ಹಾಳಾಗಿದ್ದು ತುರ್ತಾಗಿ ಪರಿಹಾರ ವಿತರಿಸುವಂತೆ ಹಾಗೂ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗೆ ದೂರವಾಣಿ ಮೂಲಕ ಕರೆ ಮಾಡಿ ಸೂಚನೆ ನೀಡಿದರು.
ಕಳೆದ ಹಲವು ದಿನಗಳಿಂದ ಆನೆಗಳು ನಿರಂತರ ದಾಳಿ ಮಾಡಿ ಬೆಳೆ ಹಾನಿ ಮಾಡುತ್ತಿದ್ದು ರೈತರು ಆನೆಗಳ ಕಾಟಕ್ಕೆ ತತ್ತರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಮುಖಂಡರಾದ ಬಸಪ್ಪ ಗೌಡ, ಕೆರೋಡಿ ನಾಗರಾಜ್, ನಾರಾಯಣಗೌಡ, ಪ್ರದೀಪ್ ಎಸ್ ಹೆಬ್ಬೂರ್ ಇತರರಿದ್ದರು.