ರಾಣೆಬೆನ್ನೂರ: ನಗರದ 220 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಸೆ. 23ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ನಗರ ಹಾಗೂ ಎಲ್ಲ 11ಕೆ.ವಿ ಮಾರ್ಗ ಮಾರ್ಗಗಳಿಗೆ ಮತ್ತು ಗಂಗಾಜಲ ತಾಂಡಾ, ಯರೇಕುಪ್ಪಿ, ಅಸುಂಡಿ, ಕೂನಬೇವು ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.