Electricity Bill Shock : ನಿವೃತ್ತ ಶಾಲಾ ಶಿಕ್ಷಕರೊಬ್ಬರಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 15 ಲಕ್ಷ ರೂ. ವಿದ್ಯುತ್ ಬಂದಿದೆ. ಅಚ್ಚರಿ ಎನಿಸಿದರೂ ಇದುವೇ ಸತ್ಯ. ಈ ಘಟನೆ ಆಂಧ್ರ ಪ್ರದೇಶದ ಡಾ. ಬಿ.ಆರ್. ಅಂಬೇಡ್ಕರ್ ಕೊನಸೀಮಾ ಜಿಲ್ಲೆಯಲ್ಲಿ ನಡೆದಿದೆ.
ಮಮೇಡಿಕುದುರು ಮಂಡಲದ ನಿವೃತ್ತ ಶಿಕ್ಷಕ ನನ್ನೇಶ್ ಹುಸೇನ್ ಅವರ ಮನೆಗೆ 15,14,993 ರೂ. ಕರೆಂಟ್ ಬಿಲ್ ಬಂದಿದೆ. ಬಿಲ್ ನೋಡುತ್ತಿದ್ದಂತೆ ಹುಸೇನ್ ಅವರು ತೀವ್ರ ಆಘಾತಕ್ಕೆ ಒಳಗಾದರು.
ಅಂದಹಾಗೆ, ಪ್ರತಿ ತಿಂಗಳು ಅವರ ಮನೆಗೆ ಸರಾಸರಿ 1300 ರೂ.ಗಳ ಬಿಲ್ ಬರುತ್ತಿತ್ತು. ಆದರೆ, ಈ ತಿಂಗಳು ಇಷ್ಟೊಂದು ದೊಡ್ಡ ಬಿಲ್ ಬಂದಿರುವುದಕ್ಕೆ ಅವರು ವಿದ್ಯುತ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಂಧ್ರ ಪ್ರದೇಶ ಸರ್ಕಾರ ಅಳವಡಿಸಿದ ಡಿಜಿಟಲ್ ಮೀಟರ್‌ಗಳ ನಂತರ ಸಾಮಾನ್ಯ ಜನರ ಮೇಲೆ ಕರೆಂಟ್ ಬಿಲ್‌ಗಳ ಹೊರೆ ಹೆಚ್ಚಾಗಿದೆ ಎಂದು ನಿವೃತ್ತ ಶಿಕ್ಷಕ ನನ್ನೇಶ್ ಹುಸೇನ್ ವಿಷಾದಿಸಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ನನ್ನೇಶ್ ಮನವಿ ಮಾಡಿದ್ದಾರೆ. ಇನ್ನು 15 ಲಕ್ಷ ರೂ. ಬಿಲ್ ಬಂದಿರುವುದು ಇಡೀ ಊರಿನ ತುಂಬಾ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇಂತಹ ಪ್ರಕರಣಗಳು ಇದೇ ಮೊದಲೇನಲ್ಲ, ಕರ್ನಾಟಕಲ್ಲೂ ಇಂತಹ ಪ್ರಕರಣಗಳು ವರದಿಯಾದ ಉದಾಹರಣೆಗಳಿವೆ. (ಏಜೆನ್ಸೀಸ್)