ನ್ಯೂಸ್

ಅಕ್ರಮ ವಿದ್ಯುತ್ ಸಂಪರ್ಕ ನೀಡಲು ಯತ್ನಿಸಿದ ಎಲೆಕ್ಟ್ರಿಷಿಯನ್ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವು | Electrician

Electrician: ಅಕ್ರಮ ವಿದ್ಯುತ್ ಸಂಪರ್ಕ ನೀಡಲು ಯತ್ನಿಸುತ್ತಿದ್ದ ಖಾಸಗಿ ಎಲೆಕ್ಟ್ರಿಷಿಯನ್ ಒಬ್ಬರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಹೈದರಾಬಾದ್​ನಲ್ಲಿ ಶುಕ್ರವಾರ (ಮೇ.23) ನಡೆದಿದೆ.

ಅಕ್ರಮವಾಗಿ ವಿದ್ಯುತ್​​ ಸಂಪರ್ಕವನ್ನು ಪಡೆಯಲು ಮುಂದಾದ ಮೆಡ್ಚಲ್‌ನ ಅಥ್ವೆಲ್ಲಿ ಗ್ರಾಮದ ಡಿ. ಲಿಂಗಂ (50) ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)